ಬೆಂಗಳೂರು: ಕೇರಳದ ಜೈ ಹಿಂದ್ ಸುದ್ದಿ ವಾಹಿನಿಯಲ್ಲಿ ಹೂಡಿಕೆ ಮಾಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಈಗ ಸಂಕಷ್ಟ ಎದುರಾಗಿದೆ.
ಜೈ ಹಿಂದ್ ಚಾನೆಲ್ ನಲ್ಲಿ ಹೂಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಚಾನೆಲ್ ಮುಖ್ಯಸ್ಥ ಶಿಬು ಅವರಿಗೆ ಬೆಂಗಳೂರಿನಲ್ಲಿರುವ ಸಿಬಿಐ ಘಟಕ ವಿವರಣೆ ಕೋರಿ ನೋಟಿಸ್ ಜಾರಿ ಮಾಡಿದೆ.
ಜನವರಿ 11 ರೊಳಗಾಗಿ ಸಮಗ್ರ ವಿವರಣೆ ನೀಡುವಂತೆ ನೋಟಿಸ್ ನೀಡಿದೆ. ಈ ಹಿಂದೆ ಬೆಂಗಳೂರಿನ ಸಿಬಿಐ ಘಟಕ ಡಿಕೆಶಿ ವಿರುದ್ಧ ಆದಾಯ ಮಿತಿ ಮೀರಿ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ನಡೆಸಿತ್ತು.
ಡಿಕೆಶಿ ಮತ್ತು ಅವರ ಪತ್ನಿ ಉಷಾ ಮಾಡಿದ ಹೂಡಿಕೆ, ಷೇರು ವ್ಯವಹಾರ, ಹಣಕಾಸಿನ ವಹಿವಾಟಿಗೆ ಸಂಬಂಧಿಸ ಎಲ್ಲಾ ಬ್ಯಾಂಕ್ ವಿವರಗಳನ್ನು ಸಲ್ಲಿಸುವಂತೆ ಸಿಬಿಐ ನಿರ್ದೇಸಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜೈ ಹಿಂದ್ ಮುಖ್ಯಸ್ಥ ಶಿಜು ಎಲ್ಲಾ ದಾಖಲೆಗಳನ್ನು ಸೂಕ್ತ ಸಮಯಕ್ಕೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ನಾಯಕರೂ ಆಗಿರುವ ಶಿಜು ಇದೆಲ್ಲಾ ಕೇಂದ್ರದ ಕುಮ್ಮಕ್ಕಿನಿಂದ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.