ಕರವೇ ಹೋರಾಟ- ಬಂಧನ ವಿಚಾರವಾಗಿ ಡಿಸಿಎಂ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಕನ್ನಡವನ್ನು ಉಳಿಸಲಿ ಬೆಳೆಸಲಿ ಹೋರಾಟ ಮಾಡುವವರಿಗೆ ಯಾರಿಗೂ ಬೇಡ ಎನ್ನಲ್ಲ.ಆದರೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡಿದ್ದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ.ಬೋರ್ಡ್ ಹಾಕು ಎನ್ನಲಿ, ತಪ್ಪು ಅನ್ನಲ್ಲ ಆದರೆ ಹೆದರಿಸಿ ಆಸ್ತಿಪಾಸ್ತಿ ಹಾನಿ ಮಾಡಿದರೆ ಯಾರೂ ಒಪ್ಪಲು ಆಗಲ್ಲ.ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ.
ಕನ್ನಡ ಫಲಕ ಹಾಕದವರಿಗೆ ನೊಟೀಸ್ ಕೊಡ್ತೇವೆ.ಆಸ್ತಿಗಳನ್ನು ಒಡೆಯೋದು ಮಾಡಬಾರದು.ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಯಾರೂ ಮಾಡಬಾರದು.ಸರ್ಕಾರ ಬರಲು ಸಹಕಾರ ಇತ್ತು ಇಲ್ಲ ಅಂತ ನಾನು ಹೇಳಲ್ಲ.ಅವರು ಸಹಕಾರ ನೀಡಿದ್ದಾರೆ, ಇಲ್ಲ ಅಂತಲ್ಲ ಹಾಗಂತ ಆಸ್ತಿಪಾಸ್ತಿ ಹಾನಿ ಮಾಡುವುದಕ್ಕಾಗುತ್ತದಾ? ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.