ಚುನಾವಣಾ ಪ್ರಣಾಳಿಕೆಯಲ್ಲಿ ನಮ್ಮೆಲ್ಲ ಕನ್ನಡಿಗರಿಗೆ ಉದ್ಯೋಗ ಕೊಡಿಸುವ ಕಾರ್ಯಕ್ರಮ ಇತ್ತು.ಖಾಸಗಿ ಕ್ಷೇತ್ರದಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಮಾಡಬೇಕು ಅಂತ ಸಿಎಂ ಚರ್ಚೆ ಮಾಡಿದ್ದಾರೆ.ಬಿಜೆಪಿ ಉದ್ಯೋಗ ಸೃಷ್ಟಿ ಮಾಡಲಿಲ್ಲ ಹಾಗಾಗಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸಿದ್ರು.ಆಗ ಯುವಕರಿಗೆ ಭರವಸೆ ನೀಡಲಾಗಿತ್ತು.ಉದ್ಯೋಗ ಯಾವ ರೀತಿ ಕೊಡಬೇಕು.ಇಂಡಸ್ಟ್ರಿ ಜೊತೆ ಹೇಗೆ ಮಾಡಬೇಕು ಅಂತ ಸಚಿವರ ಜೊತೆ ಚರ್ಚೆಯಾಗಿದೆ.
ಸಲಹೆ ಕೂಡ ನೀಡಿದ್ದಾರೆ.ಇಂಡಸ್ಟ್ರಿಗೆ ತಕ್ಕಂತೆ ಹುಡುಗರನ್ನ ಸಿದ್ಧ ಮಾಡಬೇಕು.ಈಗ ಸಚಿವರ ಸಮಿತಿ ರಚನೆ ಮಾಡಲಾಗಿದೆ.ಪ್ರಾರಂಭದಲ್ಲಿ ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ ಇತ್ತು.ವಿಶೇಷವಾಗಿ ಗ್ರಾಮೀಣ ಮಕ್ಕಳಿಗೆ ಆಧ್ಯತೆ ನೀಡಲಾಗಿದೆ.ಎಲ್ಲಾ ಇಂಡಸ್ಟ್ರಿ ಎಲ್ಲವೂ ಸೇರಬೇಕು.ಗ್ರಾಮೀಣ, ನಮ್ಮಕನ್ನಡ ವಿದ್ಯಾರ್ಥಿಗಳಿಗೆ ಅನುಕೂಲ ಆಗಬೇಕು.ಜನವರಿ ತಿಂಗಳಲ್ಲಿ ಕಾರ್ಯಕ್ರಮ ನಡೆಯಲಿದೆ.ಮೊದಲು ಬೆಂಗಳೂರು, ನಂತರ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಮೇಳ ನಡೆಯಲಿದೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.