Publish Date: Thu, 28 Mar 2019 (12:54 IST)
Updated Date: Thu, 28 Mar 2019 (12:55 IST)
ಹಾಸನ : ಸಚಿವ ಸಿಎಸ್ ಪುಟ್ಟರಾಜು ಆಪ್ತರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಇದೀಗ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಆಪ್ತರ ಮೇಲೂ ಐಟಿ ಅಧಿಕಾರಿಗಳು ದಾಳಿನಡೆಸಿದ್ದಾರೆ.
ಚನ್ನರಾಯಪಟ್ಟಣ ಹಾಸನ ಸೇರಿ ಮೂರು ಕಡೆ ಐಟಿ ರೇಡ್ ಆಗಿದೆ. ಅಶ್ವಥ್ ನಾರಾಯಣ್ ರೆಡ್ಡಿ, ರಾಯಗೌಡ ಸೇರಿದಂತೆ ಒಟ್ಟು ಮೂವರ ಮನೆಗಳ ಮೇಲೆ ದಾಳಿ ನಡೆದಿದೆ. ಹಾಸನದ ರೇವಣ್ಣ ಅವರ ಇಲಾಖೆಗೆ ಸೇರಿದಂತೆ ಪಿಡ್ಲ್ಬೂಡಿ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ
ಜಿಲ್ಲಾದ್ಯಂತ ಲೋಕೋಪಯೋಗಿ ಇಲಾಖೆಗೆ ಸೇರಿದಂತೆ ಏನೂ ಕಾಮಗಾರಿ ನಡೆದಿದೆ? ಇತ್ತೀಚೆಗೆ ಸರ್ಕಾರ ಬಂದ ನಂತರ ಏನೇನೂ ಕಾಮಗಾರಿ ನಡೆದಿದೆ? ಯೋಜನೆಗಳಿಗೆ ಕೋಟ್ಯಂತರ ರೂ. ಬಂದಿರುವ ಹಣ ಹೇಗೆ ಬಳಕೆಯಾಗಿದೆ? ಎನ್ನುವುದನ್ನು ಪರಿಶೀಲನೆ ನಡೆಸುತ್ತಿದ್ದಾರೆ.
.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
pavithra
Publish Date: Thu, 28 Mar 2019 (12:54 IST)
Updated Date: Thu, 28 Mar 2019 (12:55 IST)