Publish Date: Mon, 03 Apr 2023 (21:20 IST)
Updated Date: Mon, 03 Apr 2023 (20:46 IST)
ಮಂಡ್ಯದ ನಾಗಮಂಗಲದಲ್ಲಿ ಫೈಟರ್ ರವಿಗೆ BJP ಟಿಕೆಟ್ ಕನ್ಫರ್ಮ್ ಆಗಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ JDS ಉಚ್ಛಾಟಿತ ಶಾಸಕ L.R. ಶಿವರಾಮೇಗೌಡ BJP ಸೇರ್ಪಡೆ ಡೌಟ್ ಎನ್ನಲಾಗಿದೆ.. ಕೆಲ ದಿನಗಳಿಂದ ಬಿಜೆಪಿ ಸೇರುವುದಾಗಿ ಶಿವರಾಮೇಗೌಡ ಹೇಳಿಕೆ ನೀಡಿದ್ದರು.. ನಿನ್ನೆ ಖಾಸಗಿ ರೆಸಾರ್ಟ್ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ ಆಗ್ತೀನಿ ಎಂದಿದ್ರು.. ಆದರೆ L.R. ಶಿವರಾಮೇಗೌಡ BJP ಪಕ್ಷ ಸೇರ್ಪಡೆ ಸಭೆ ಕ್ಯಾನ್ಸಲ್ ಆಗಿದೆ.. ನಾಗಮಂಗಲ ಕ್ಷೇತ್ರಕ್ಕೆ ಫೈಟರ್ ರವಿ ಅಭ್ಯರ್ಥಿ ಎಂಬ ವಿಚಾರ ಬಿಜೆಪಿ ಮೂಲಗಳಿಂದ ಹೊರ ಬಿದ್ದಿದೆ.. ಬಿಜೆಪಿ ಟಿಕೆಟ್ ಸಿಗಲ್ಲ ಎಂದು L.R. ಶಿವರಾಮೇಗೌಡ ಯೂಟರ್ನ್ ಹೊಡೆದ್ರಾ ಎಂಬ ಅನುಮಾನ ಮೂಡಿದೆ.