Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಹಾರಾಷ್ಟ್ರದ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಸೊಲ್ಲಾಪುರ ಜಿಲ್ಲಾ (ಗ್ರಾಮೀಣ) ಅಧ್ಯಕ್ಷ ಶ್ರೀಕಾಂತ್ ದೇಶ್‌ಮುಖ್ ಅವರನ್ನು ಪದಚ್ಯುತಗೊಳಿಸಿದೆ.
ದೇಶ್‌ಮುಖ್ ಮಹಿಳೆಯೊಂದಿಗೆ ಕಾಣಿಸಿಕೊಂಡಿರುವ ವೀಡಿಯೊ ವೈರಲ್ ಆದ ನಂತರ ಅವರನ್ನು ಪದಚ್ಯುತಗೊಳಿಸಿದೆ ಎಂದು ಪಕ್ಷದ ಮುಖಂಡರೊಬ್ಬರು ಮಂಗಳವಾರ ತಿಳಿಸಿದ್ದಾರೆ.
ದೇಶಮುಖ್ ಅವರ ದೂರಿನ ಮೇರೆಗೆ ಮುಂಬೈ ಪೊಲೀಸರು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ರಾತ್ರಿ ತಿಳಿಸಿದ್ದಾರೆ.
ವಿಡಿಯೊ ಕ್ಲಿಪ್‌ನಲ್ಲಿ ಕಂಡುಬರುವ ಮಹಿಳೆ ಮುಂದೆ ಬಂದು ಪೊಲೀಸರಿಗೆ ದೂರು ನೀಡಬೇಕು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಚಿತ್ರಾ ವಾಘ್ ಹೇಳಿದ್ದಾರೆ.
ಮಹಿಳೆ ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ದೇಶಮುಖ್ ಅವರು ಕೋಣೆಯಲ್ಲಿ ಹಾಸಿಗೆಯ ಮೇಲೆ ಕುಳಿತಿರುವಾಗ ಅವಳು ಅಳುತ್ತಿದ್ದಳು. ಇವರು ತನ್ನೊಂದಿಗೆ ಸಂಬಂಧ ಇಟ್ಟುಕೊಂಡು ವಂಚಿಸಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ.
ಏತನ್ಮಧ್ಯೆ, ಎರಡು ದಿನಗಳ ಹಿಂದೆ ದೇಶಮುಖ್ ಅವರು ನೀಡಿದ ದೂರಿನ ಮೇರೆಗೆ ವೀಡಿಯೊದಲ್ಲಿ ಕಂಡುಬರುವ ಮಹಿಳೆಯ ವಿರುದ್ಧ ಸುಲಿಗೆ ಆರೋಪದಡಿಯಲ್ಲಿ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈನ ಓಶಿವಾರದ ನಿವಾಸಿಯಾಗಿರುವ 32 ವರ್ಷದ ಮಹಿಳೆಯಿಂದ ತಾನು 'ಹನಿ-ಟ್ರ್ಯಾಪ್' ಆಗಿದ್ದೇನೆ ಎಂದು ದೇಶಮುಖ್ ಹೇಳಿಕೆ ನೀಡಿದ್ದಾರೆ.