Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಳಗಾವಿ: ಕನ್ನಡ ಚಿತ್ರನಟ ಶಿವರಂಜನ್ ಬೊಳ್ಳಣ್ಣವರ್ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ.
ಅದೃಷ್ಟವಶಾತ್ ಶಿವರಂಜನ್ ದಾಳಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿಯ ಬೈಲಹೊಂಗಲದ ಹನುಮಂತ ದೇವಾಲಯದ ಬಳಿಯಿರುವ ಮನೆ ಮುಂದೆ ಅಪರಿಚಿತ ಮೂರು ಸುತ್ತಿನ ಗುಂಡು ಹಾರಿಸಿದ್ದಾನೆ.
ಆದರೆ ಮಿಸ್ ಫೈಯರ್ ಆಗಿದ್ದರಿಂದ ಶಿವರಂಜನ್ ಬದುಕುಳಿದಿದ್ದಾರೆ. ಸ್ಥಳಕ್ಕೆ ಭೇಟಿ ನಿಡಿದ ಪೊಲೀಸರು ಇದೀಗ ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.