ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರಿಗೆ ಕಾಣಿಕೆ ಮೇಲೆ ಕಾಣಿಕೆ ನೀಡ್ತಿದೆ. ಆದರೆ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ, ಇನ್ನೂ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ಇದ್ದರೂ ಕೂಡ ಕಣ್ಣುಕಾಣದ ರೀತಿ ಬಂಪರ್ ಮೇಲೆ ಬಂಪರ್ ನೀಡುತ್ತಿದೆ ಎಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಆರ್. ಅಶೋಕ್ ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬರಗಾಲದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಪರಿಹಾರ ನೀಡಿಲ್ಲ. 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ಇದ್ರೂ ಕೂಡ ಸಿದ್ದರಾಮಯ್ಯ ಅವರು ಕಣ್ಣು ಕಾಣದ ರೀತಿ ಬಂಪರ್ ಮೇಲೆ ಬಂಪರ್ ನೀಡ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಅಭಿವೃದ್ಧಿಗೆ ಸಿಗೋದೇ 5000 ಕೋಟಿ. ಅದರಲ್ಲಿ ಅಲ್ಪಸಂಖ್ಯಾತರ ಕಾಲೋನಿಗೆ 1 ಸಾವಿರ ಕೋಟಿ ಅಭಿವೃದ್ಧಿಗೆ ಬಿಟ್ಟಿದ್ದಾರೆ. ಹಿಂದೂಗಳೇನು, ದಲಿತರೇನು ಮಾಡಬೇಕು? ಪಾರ್ಲಿಮೆಂಟ್ ಚುನಾವಣೆಗೆ ಓಲೈಕೆ ಮಾಡ್ತಿದ್ದಾರೆ. ಇವರಲ್ಲಿ ಟಿಪ್ಪು ಸಂಸ್ಕೃತಿ ಹೇರುವ ಕೆಲಸ ಸಿದ್ದರಾಮಯ್ಯ ಮಾಡ್ತಿದ್ದಾರೆ ಎಂದರು.
ಕಾಂಗ್ರೆಸ್‌ನ ಬಿ.ಆರ್ ಪಾಟೀಲ್ ಹೇಳುತ್ತಿದ್ದಾರೆ ಒಂದೇ ಒಂದು ಅಭಿವೃದ್ಧಿ ಕಲ್ಲು ಹಾಕಿಲ್ಲ ಅಂತ. ಈ ರೀತಿ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಹಿಂದೂಗಳು ವಾಸ ಮಾಡುವ ಜಾಗದಲ್ಲಿ ಅಭಿವೃದ್ಧಿ ಯಾಕಿಲ್ಲ? PFI ಮೇಲಿನ ಕೇಸ್ ವಾಪಸ್ ಪಡೆದ್ರು. ಕೆ.ಜಿ ಹಳ್ಳಿ, ಡಿಜೆ ಹಳ್ಳಿ ಘಟನೆ ಕೇಸ್ ವಾಪಸ್ ಪಡೆಯುವಂತೆ ಮೈಸೂರು ಶಾಸಕ ಪತ್ರ ಬರೆದು ವಾಪಸ್ ಪಡೆಯಲು ಶಿಫಾರಸ್ಸು ಮಾಡ್ತಾರೆ. ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವರನ್ನ ನಮ್ಮ ಬ್ರದರ್ಸ್ ಅಂತ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ರು. ಸಿದ್ದರಾಮಯ್ಯ ಪ್ರಮಾಣವಚನ ಪಡೆಯುವಾಗ ಎಲ್ಲಾ ಧರ್ಮ ಸಮಾನ ಕಾಣ್ತೀನಿ ಅಂದ್ರು, ಆದರೆ ಅವರು ಕಾಣಲಿಲ್ಲ ಎಂದು ಆರ್, ಅಶೋಕ್ ಕಿಡಿಕಾರಿದ್ದಾರೆ.
ಒಬ್ಬ ರೈತರಿಗೆ 35 ಸಾವಿರ ಕೊಡಬೇಕು. ಬೆಳಗಾವಿ ಅಧಿವೇಶನದಲ್ಲಿ ಎರಡು ಸಾವಿರ ಘೋಷಣೆ ಮಾಡಿದ್ರು. ಒಂದು ವಾರದಲ್ಲಿ ಎರಡು ಸಾವಿರ ಕೊಡ್ತೀನಿ ಅಂದ್ರು. ಅಧಿವೇಶನ ಮುಗಿದು ಇಷ್ಟು ದಿನ ಆಯ್ತು ಇನ್ನೂ ಕೊಟ್ಟಿಲ್ಲ. ಆದರೆ ಅಲ್ಪಸಂಖ್ಯಾತರಿಗೆ 1 ಸಾವಿರ ಕೋಟಿ ಕೊಟ್ಟಿದ್ದಾರೆ. ಇವರು ಓಲೈಕೆ ಮಾಡ್ತಿದ್ದಾರೆ. ಹಿಂದೆ ಟಿಪ್ಪು ಹಿಂದೂ, ಮುಸ್ಲಿಂ ಹೇಗೆ ಪ್ರತ್ಯೇಕ ಮಾಡಿದನೋ, ಅದೇ ರೀತಿ ಮಾಡಲಾಗ್ತಿದೆ. ಹಿಂದೂ ಕಾಲೋನಿ, ಮುಸ್ಲಿಂ ಕಾಲೋನಿ ಅಂತ ಬೇದ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ
ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಚೆಕ್ ಬೌನ್ಸ್ ಕೇಸ್ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ R.ಅಶೋಕ್, ಶಿಕ್ಷಣ ಇಲಾಖೆ ಸಚಿವರ ಪಾಡೇ ಹೀಗಾದ್ರೆ ಹೇಗೆ? ಕೋರ್ಟ್ ಆದೇಶ ಆದ್ರೂ ಸಿಎಂ ಇನ್ನೂ ರಾಜೀನಾಮೆ ಪಡೆದಿಲ್ಲ. ಕಾಂಗ್ರೆಸ್ ಸರ್ಕಾರ ಲೂಟಿ ಹೊಡೆಯಲು ಒಂಟಿ ಕಾಲಲ್ಲಿ ನಿಂತಿದೆ. ಚೆಕ್ಬೌನ್ಸ್ ಅಂದ್ರೆ ಮೋಸ ಮಾಡಿದ್ದಾರೆ ಅಂತ ಅರ್ಥ. ಕೂಡಲೇ ಮಧು ಬಂಗಾರಪ್ಪ ರಾಜೀನಾಮೆ ಪಡೆಯುವಂತೆ ಆರ್.ಅಶೋಕ್ ಆಗ್ರಹಿಸಿದ್ದಾರೆ.