Publish Date: Wed, 03 May 2023 (17:20 IST)
Updated Date: Wed, 03 May 2023 (18:13 IST)
ಚುನಾವಣಾ ದಿನ ಹತ್ತಿರವಾಗ್ತಿದೆ. ಇತ್ತ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಲು ಜನ ಮನ ತಲುಪಲು ಪ್ರತಯ್ನ ಮಾಡ್ತಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಅವರು ಇಂದು ಕ್ಷೇತ್ರದಲ್ಲಿ ಅಬ್ಬದರ ಪ್ರಚಾರ ಮಾಡಿದರು. ಕ್ರಮ ಸಂಖ್ಯೆ 5 ಗೆದ್ದ ನಂತರ ಅಭಿವೃದ್ಧಿ ಆಡಳಿತ ಕೂಡ ಐದು ವರ್ಷ ಅಂತ ಜನರಲ್ಲಿ ಭರವಸೆ ನೀಡಿದರು. ಪ್ರಚಾರಕ್ಕೂ ಮೊದಲು ನಗರದ ಮಂಗನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ಮಂಗನಹಳ್ಳಿ, ಚಿಕ್ಕಕೋಡಿಗೇಹಳ್ಳಿ, ಕೋಡುಗೇಹಳ್ಳಿ ಕಾಲೋನಿ, ಚಿಕ್ಕ ಗೊಲ್ಲರಹಟ್ಟಿ, ಸೀಗೆಹಳ್ಳಿ ,ಕನ್ನಲ್ಲಿ ಯಲ್ಲಿ ಪ್ರಚಾರ ಮಾಡಿದರು. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಿವೆ. ನಾನು ಅಧಿಕಾರಕ್ಕೆ ಬಂದ ನಂತರ ಮತ್ತಷ್ಟು ಅಭಿವೃದ್ಧಿ ಪರ ಕಾರ್ಯ ಮಾಡುತ್ತೆನೆ. ಪ್ರಧಾನಮಂತ್ರಿ ಮೋದಿ, ಅಮಿತ್ ಷಾ, ರೋಡ್ ಶೋ. ನಡ್ಡಾ ಬೆಂಬಲ ಬಿಜೆಪಿಗೆ ಮತ್ತಷ್ಟು ಬಲ ತಂದಿದೆ ಎಂದು ಎಸ್ ಟಿ ಸೋಮಶೇಖರ್ ಹೇಳಿದರು.