Publish Date: Wed, 03 May 2023 (17:00 IST)
Updated Date: Wed, 03 May 2023 (18:08 IST)
ಅತಿ ಹೆಚ್ಚು ವಿದ್ಯಾವಂತ ಮತದಾರರಿರುವ ಕ್ಷೇತ್ರಗಳಲ್ಲಿ ಜಯನಗರ ವಿಧಾನಸಭಾ ಕ್ಷೇತ್ರ ಕೂಡ ಒಂದು. ಇಲ್ಲಿ ಕಾಂಗ್ರೆಸ್, ಬಿಜೆಪಿ ಗೆಲುವಿಗಾಗಿ ಶತಪ್ರಯತ್ನ ಮಾಡುತ್ತಿವೆ. ಇಂದು ಜಯನಗರ ದ ವಿವಿಧ ಬಡಾವಣೆ ಗಳಲ್ಲಿ ಬಿಜೆಪಿ ಅಭ್ಯರ್ಥಿ ಸಿಕೆ ರಾಮಮೂರ್ತಿ ತಮ್ಮ ಬೆಂಬಲಿಗರು, ಕಾರ್ಯಕರ್ತ ರೊಂದಿಗೆ ಮತಯಾಚನೆ ಮಾಡಿದ್ರು. ಈಗಾಗಲೇ ಎರಡು ಬಾರಿ ಪಾಲಿಕೆ ಸದಸ್ಯರಾಗಿರುವ ರಾಮಮೂರ್ತಿ ಅವರಿಗೆ ಕ್ಷೇತ್ರದ ಜನರ ಸಮಸ್ಯೆಗಳು ಸೇರಿದಂತೆ ಕ್ಷೇತ್ರದ ಪರಿಚಯ ಸಾಕಷ್ಟಿದೆ. ಇನ್ನು ಅವರ ಶ್ರೀಮತಿ ಕೂಡ ಒಂದು ಬಾರಿ ಪಾಲಿಕೆ ಸದಸ್ಯೆ ಯಾಗಿದ್ರು.ಇನ್ನೂ ಜನರಿಂದ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದದ್ದು ಜನ ಈ ಬಾರಿ ನನಗೆ ಆರ್ಶಿವಾದ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕರೋನಾದಂತ ಸಮಯದಲ್ಲೂ ಕೂಡ ನಾವು ಜನರ ಕತೆ ಒಡನಾಟ ಹೊಂದಿದ್ದೇವು ದಿವಂಗತ ಶಾಸಕ ವಿಜಯ ಕುಮಾರ್ ಮಾಡಿರುವ ಅಭಿವೃದ್ಧಿ ಕೆಲಸಗಳು ಹಾಗೂ ಪಾಲಿಕೆ ಸದಸ್ಯರಾಗಿ ಮಾಡಿರುವ ಕೆಲಸಗಳೇ ನಮಗೆ ಶ್ರೀ ರಕ್ಷೆ ಅಲ್ದೆ ಇಲ್ಲಿನ ಕಾಂಗ್ರೆಸ್ ನ ಶಾಸಕಿ ಸೌಮ್ಯ ರೆಡ್ಡಿ ಅವರು ಯಾವುದೆ ಅಭಿವೃದ್ಧಿ ಕೆಲಸಗಳು ಮಾಡಿಲ್ಲ ಕ್ಷೇತ್ರದ ಜನತೆ ಬಗ್ಗೆ ಅವರಿಗೆ ಯೋಚನೆ ಇಲ್ಲ.ಹಾಗಾಗಿ ಜನ ಕೂಡ ಬದಲಾವಣೆ ಬಯಸಿದ್ದಾರೆ ಎಂದ್ರು.