Publish Date: Tue, 17 Dec 2019 (10:50 IST)
Updated Date: Tue, 17 Dec 2019 (10:52 IST)
ಮಂಡ್ಯ : ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಲು ಮಂಡ್ಯದ ಇಬ್ಬರು ಶಾಸಕರು ಚಿಂತನೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ನಾಗಮಂಗಲ ಶಾಸಕ ಸುರೇಶ್ ಗೌಡ ಅವರು ಈ ಮೊದಲೇ ಪಕ್ಷ ಬಿಡ್ತಾರೆಂಬ ಬಗ್ಗೆ ಚರ್ಚೆಯಾಗಿತ್ತು. ಆದ್ರೆ ರಾಜಕೀಯ ಭವಿಷ್ಯದ ಬಗ್ಗೆ ಹೆದರಿ ಹಿಂದೇಟು ಹಾಕಿದ್ರು.
ಆದರೆ ಇದೀಗ ಕೆ.ಆರ್.ಪೇಟೆ ರಿಸಲ್ಟ್ ನಿಂದ ಇಬ್ಬರು ಶಾಸಕರಲ್ಲಿ ಹೊಸ ವಿಶ್ವಾಸ ಮೂಡಿದ್ದು, ಆದ ಕಾರಣ ಬಿಜೆಪಿ ಸೇರುವುದಕ್ಕೆ ಇಬ್ಬರೂ ಶಾಸಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.