Publish Date: Sun, 15 Dec 2019 (15:09 IST)
Updated Date: Sun, 15 Dec 2019 (15:11 IST)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ನಿವಾಸದಲ್ಲಿ ವಿಶೇಷ ಹೋಮ ನಡೆದಿರೋದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ.
ಬೈ ಎಲೆಕ್ಷನ್ ನಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆಲ್ಲೋ ಮೂಲಕ ದಿಗ್ವಿಜಯ ದಾಖಲು ಮಾಡಿತ್ತು. ಆ ಮೂಲಕ ಸರಕಾರ ಮುಂದಿನ ಮೂರುವರೆ ವರ್ಷ ಸುಭದ್ರ ಹಾಗೂ ಆಡಳಿತ ನಡೆಸೋದ್ರಲ್ಲಿ ಇಲ್ಲವೇ ಜೀವನದಲ್ಲಿ ಅಡ್ಡಿ, ತೊಂದರೆಗಳು ಬರಬಾರದು ಅಂತ ಹೋಮ, ಹವನ ನಡೆಸಿರೋದು ಚರ್ಚೆಗೆ ಕಾರಣವಾಗುತ್ತಿದೆ.
ಸುದರ್ಶನ ನರಸಿಂಹ ಹೋಮವನ್ನು ಸಿಎಂ ನಿವಾಸದಲ್ಲಿ ನಡೆಸಲಾಗಿದೆ.
ತಮ್ಮ ಕುಟುಂಬಕ್ಕೆ ಹಾಗೂ ರಾಜಕಾರಣದಲ್ಲಿ ವಿರೋಧಗಳು ಬರದಂತೆ ತಡೆಯಲು ದೇವರು ಹಾಗೂ ಹೋಮದ ಮೊರೆ ಹೋಗಿದ್ದಾರೆ ಸಿಎಂ ಎನ್ನಲಾಗ್ತಿದೆ.