Publish Date: Sun, 28 Jul 2019 (17:56 IST)
Updated Date: Sun, 28 Jul 2019 (17:58 IST)
ಮೈತ್ರಿ ಸರಕಾರ ಪತನಗೊಂಡ ಬಳಿಕ ಬಿಜೆಪಿ ರಾಜ್ಯಭಾರ ಶುರುವಾಗಿದ್ದು, ಕಮಲ ಪಾಳೆಯ ವಿಶ್ವಾಸ ಮತವನ್ನು ಸಾಬೀತು ಪಡಿಸುತ್ತದೆ. ಹೀಗಂತ ಕಾಂಗ್ರೆಸ್ ಮುಖಂಡರೇ ಹೇಳಿ ಅಚ್ಚರಿ ಮೂಡಿಸಿದ್ದಾರೆ.
ವಿಧಾನಸಭೆಯಲ್ಲಿ ಈಗೇನಿದ್ದರೂ ಮ್ಯಾಜಿಕ್ ಸಂಖ್ಯೆಯ ಆಟ.ಇದರಲ್ಲಿ ಬಿ.ಎಸ್.ಯಡಿಯೂರಪ್ಪ ಗೆಲವು ಸಾಧಿಸುತ್ತಾರೆ. ಹೀಗಂತ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದ್ದಾರೆ.
ಯಡಿಯೂರಪ್ಪ ನಮ್ಮ ಜಿಲ್ಲೆಯವರೇ ಆಗಿದ್ದಾರೆ. ಅವರಿಗೆ ಗುಡ್ ಲಕ್ ಎಂದು ಶುಭ ಕೋರಿದ ಅವರು, ಬಿಜೆಪಿ ಆಪರೇಷನ್ ಕಮಲ ನಡೆಸಿಲ್ಲ. ನಡೆಸಿದ್ದರೂ ಅದರ ಪ್ರಮಾಣ ಕಡಿಮೆ ಅಂತ ಕಮಲ ಪಾಳೆಯದ ಪರ ಬ್ಯಾಟಿಂಗ್ ಬೀಸಿದ್ದಾರೆ.
ಕಾಂಗ್ರೆಸ್ – ಜೆಡಿಎಸ್ ದೋಸ್ತಿ ಸರಕಾರದ ನಡೆಯಿಂದ ರೋಸಿಹೋಗಿ ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ಹೋಗಿದ್ದರು ಎಂದರು.