Publish Date: Thu, 23 Feb 2023 (16:39 IST)
Updated Date: Thu, 23 Feb 2023 (16:42 IST)
ಹಾಸನದಲ್ಲಿ ರೇವಣ್ಣ, ಭವಾನಿ, ಪ್ರಜ್ವಲ್ ಪ್ರಚಾರ ಆರಂಭಿಸಿರುವ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ಇನ್ನೂ ಹಾಸನ ಟಿಕೆಟ್ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಭವಾನಿ ಸ್ಪರ್ಧೆ ಬಗ್ಗೆಯೂ ಕುಮಾರಸ್ವಾಮಿ ಯಾವುದೆ ವಿಚಾರ ಹೇಳದೆ ಜಾಣ ನಡೆ ಅನುಸರಿಸಿದ್ದಾರೆ. ಪಕ್ಷ ಸಂಘಟನೆಗಾಗಿ ಭವಾನಿ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅಭ್ಯರ್ಥಿ ಘೋಷಣೆ ಬಳಿಕ ಎಲ್ಲರೂ ಕೆಲಸ ಮಾಡ್ತಾರೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. 93 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿರುವೆ. JDS 2ನೇ ಪಟ್ಟಿ ಬಿಡುಗಡೆ ಮಾಡುತ್ತಿದ್ದೇನೆ ಎಂದು ಮಾಜಿ ಸಿಎಂ ಹೆಚ್ಡಿ.ಕುಮಾರಸ್ವಾಮಿ ಹೇಳಿದ್ರು.