ಪಬ್ , ಬಾರ್ ಕಟ್ಟಡಗಳ ಅನಧಿಕೃತ ರೂಪ್ ಟಾಪ್ ಗಳ ನಿರ್ಮಾಣ ಮಾಡಿದ್ದು,ಕಳೆದ ಮೂರು ದಿನಗಳ ಹಿಂದೆ ಕೋರಮಂಗಲದಲ್ಲಿ ಪಬ್ ಒಂದರ ರೂಪ್ ಟಾಪ್ ಮೇಲೆ ಬೆಂಕಿ ಅವಘಡ ಸಂಭವಿಸಿತ್ತು.ರೂಪ್ ಟಾಪ್ ನಿರ್ಮಾಣ ಮಾಡಿ ವಾರ್ಷಿಕ ಕೋಟ್ಯಾಂತರ ಆದಾಯ ಬಾರ್ ಮಾಲೀಕರುಗಳಿಸುತ್ತಿದ್ದು,ರೂಪ್ ಟಾಪ್ ನಿರ್ಮಾಣದ ಹಿಂದೆ ಬಿಬಿಎಂಪಿ ಅಧಿಕಾರಿಗಳ ಕೈವಾಡ ಇದ್ಯಾ ಎಂಬ ಪ್ರಶ್ನೆ ಕಾಡತೊಡಗಿದೆ.ಪಾಲಿಕೆಯಿಂದ ಪರ್ಮಿಷನ್ ಇಲ್ಲಂದ್ರು ಅನಧಿಕೃತ ರೂಪ್ ಟಾಪ್ ನಿರ್ಮಾಣ ಮಾಡಲಾಗಿದೆ.
ಬಾರ್ ಪಬ್ ಮಾಲೀಕರು ಪಾಲಿಕೆ ಅಧಿಕಾರಿಗಳಿಗೆ ಮಂತ್ಲಿ ಫಿಕ್ಸ್ ಮಾಡಿದ್ರಾ? ಎಂಬ ಪ್ರಶ್ನೆ ಕಾಡತೊಡಗಿದೆ. ರೂಪ್ ಟಾಪ್ ನಿರ್ಮಾಣ ಮಾಡಿ ಪಾಲಿಕೆಗೆ ಬಾರ್ ಮಾಲೀಕರು ತೆರಿಗೆ ವಂಚನೆ ಮಾಡಿದ್ದಾರೆ.ಸಿಲಿಕಾನ್ ಸಿಟಿಯಲ್ಲಿ 200 ಕ್ಕೂ ಹೆಚ್ಚು ಬಾರ್ ಪಬ್ಸ್ ಗಳಲ್ಲಿ ಅನಧಿಕೃತ ರೂಪ್ ಟಾಪ್ ನಿರ್ಮಾಣಮಾಡಿದ್ದು,ನಗರದ ಪೂರ್ವ ಹಾಗೂ ದಕ್ಷೀಣ ವಲಯದಲ್ಲಿ ಅತಿ ಹೆಚ್ಚು ಅನಧಿಕೃತ ರೂಪ್ ಟಾಪ್ ನಿರ್ಮಾಣಮಾಡಲಾಗಿದೆ.ಇಂತಹ ಅನಧಿಕೃತ ರೂಪ್ ಟಾಪ್ ವಿರುದ್ಧ ಕ್ರಮ ಕೈಗೊಳ್ಳಲು ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.