Select Your Language

Notifications

webdunia
webdunia
webdunia
webdunia

ಸಿಂಪಲ್ ಆಗಿ ಜನ್ಮದಿನ ಆಚರಿಸಿಕೊಂಡ ಅಭಿಷೇಕ್ ಅಂಬರೀಶ್

ಅಭಿಷೇಕ್ ಅಂಬರೀಶ್
Photo Courtesy: Twitter
ಬೆಂಗಳೂರು: ಜ್ಯೂ.ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಗೆ ಇಂದು ಜನ್ಮದಿನದ ಸಂಭ್ರಮ. ಮೊದಲೇ ಹೇಳಿದಂತೆ ಇಂದು ಅಭಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸುತ್ತಿಲ್ಲ.

ಕಾವೇರಿ ವಿವಾದದಿಂದಾಗಿ ನಾಡು ಸಂಕಷ್ಟದಲ್ಲಿರುವಾಗಲ ಅದ್ಧೂರಿ ಆಚರಣೆ ಸರಿಯಲ್ಲ ಎಂದು ಸರಳವಾಗಿ ಹುಟ್ಟುಹಬ್ಬ ಆಚರಿಸುವುದಾಗಿ ಅಭಿ ಹೇಳಿಕೊಂಡಿದ್ದರು. ಮನೆ ಬಳಿ ಬರುವ ರೆಬಲ್ ಅಭಿಮಾನಿಗಳು ಹಾರ, ಕೇಕ್ ತರಬಾರದೆಂದು ಆರ್ಡರ್ ಮಾಡಿದ್ದರು.

ಇದೀಗ ಅಭಿ ನುಡಿದಂತೆ ನಡೆದಿದ್ದಾರೆ. ಸರಳವಾಗಿ ಮನೆಯಲ್ಲಿಯೇ ತಂದೆಯ ಫೋಟೋಗೆ ಪೂಜೆ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಜೊತೆಗೆ ಮನೆ ಬಳಿ ತಮ್ಮನ್ನು ನೋಡಲು ಬಂದ ಅಭಿಮಾನಿಗಳನ್ನು ಮಾತನಾಡಿಸಿ ಅವರಿಗೆ ಸೆಲ್ಫೀ ನೀಡಿ ಖುಷಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ವಿಚಾರವಾಗಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ನಟ ಪ್ರೇಮ್