Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಗಂಡನನ್ನು ಕೊಂದು ಆತನ ಶವವನ್ನು ಶೌಚಾಲಯದ ಗುಂಡಿಗೆಸೆದಿದ್ದ ಪತ್ನಿ ಹಾಗೂ ಆಕೆಗೆ ಸಹಾಯ ಮಾಡಿದ್ದ ನಾದಿನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೋಗಿಲು ಲೇಔಟ್ ನಿವಾಸಿಗಳಾದ ನಾಜಿಯಾ ಖಾತುಂ ಮತ್ತು ಆಕೆಯ ಸಹೋದರಿ ಕಾಶೀರಿ ಖಾತುಂ ಬಂಧಿತರು.
ಪತಿ ಜೊತೆ ನಾಜಿಯಾಗೆ ಮನಸ್ತಾಪವಿತ್ತು. ಪತಿಗೆ ಪರಸ್ತ್ರೀಯ ಸಂಗವಿತ್ತು. ಅಲ್ಲದೆ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ ತನ್ನ ಸಹೋದರಿಯ ಜೊತೆ ಸೇರಿಕೊಂಡು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ಶೌಚದ ಗುಂಡಿಗೆ ಎಸೆದಿದ್ದಾಳೆ. ಮೃತದೇಹ ಕೊಳೆತ ವಾಸನೆ ತಿಳಿದ ನೆರೆಹೊರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.