Publish Date: Fri, 02 Jul 2021 (09:24 IST)
Updated Date: Fri, 02 Jul 2021 (09:41 IST)
ಬೆಂಗಳೂರು: ರಾಜ್ಯದಲ್ಲಿ ವಿದ್ಯಾರ್ಥಿಗಳ ಲಸಿಕೆ ಪ್ರಕ್ರಿಯೆ ಮುಗಿದ ಕೂಡಲೇ ಕಾಲೇಜು ಆರಂಭಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.
ಮೂಲಗಳ ಪ್ರಕಾರ ಜುಲೈ 10 ರ ಬಳಿಕ ಕಾಲೇಜುಗಳು ಆನ್ ಲೈನ್ ಅಥವಾ ಆಫ್ ಲೈನ್ ನಲ್ಲಿ ಆರಂಭವಾಗುವುದು ಪಕ್ಕಾ ಆಗಿದೆ. ಆನ್ ಲೈನ್ ಅಥವಾ ಆಫ್ ಲೈನ್ ತರಗತಿಗೆ ಹಾಜರಾತಿ ಕಡ್ಡಾಯವಾಗಲಿದೆ.
ಜುಲೈ 7 ರೊಳಗಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ಪೂರ್ತಿಗೊಳಿಸಲು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಸೂಚನೆ ನೀಡಿದ್ದಾರೆ. ಲಸಿಕೆ ಪೂರ್ತಿಯಾದ ಬಳಿಕ ಕಾಲೇಜು ಆರಂಭವಾಗಲಿದೆ. ಈಗಾಗಲೇ ಕೆಲವು ಕಾಲೇಜುಗಳು ಆನ್ ಲೈನ್ ತರಗತಿ ನಡೆಸುತ್ತಿದೆ. ಆದರೆ ಭೌತಿಕ ತರಗತಿ ನಡೆಸಲು ಇನ್ನೂ ಸರ್ಕಾರದ ಒಪ್ಪಿಗೆ ಸಿಕ್ಕಿಲ್ಲ.