Publish Date: Sat, 22 Apr 2023 (16:16 IST)
Updated Date: Sat, 22 Apr 2023 (17:08 IST)
ಕಲಬುರಗಿ ಗ್ರಾಮೀಣ ಬಿಜೆಪಿ ಕಾರ್ಯಕರ್ತ ಯಲ್ಲಾಲಿಂಗ ಪೂಜಾರಿ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.. ಬಿಜೆಪಿ ಕಾರ್ಯಕರ್ತ ಯಲ್ಲಾಲಿಂಗ ಪೂಜಾರಿ ನಿನ್ನೆ ಸಂಜೆ ಬಿಜೆಪಿ ಪ್ರಚಾರ ಕಾರ್ಯ ಮುಗಿಸಿ ತೆರಳುವ ವೇಳೆ ಬಿಜೆಪಿಗೆ ಜೈಕಾರ ಹಾಕಿದ್ದಕ್ಕೆ ಕಾಂಗ್ರೆಸ್ ಕಾರ್ಯರ್ತರು ರೊಚ್ಚಿಗೆದ್ದು ಹಲ್ಲೆ ನಡೆಸಿದ್ದಾರೆ. ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮರತೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ.. ಹಲ್ಲೆಗೆ ಒಳಗಾದ ಯಲ್ಲಾಲಿಂಗ ಪೂಜಾರಿ ಜಿಮ್ಸ್ ಅಸ್ಪತ್ರೆಗೆ ದಾಖಲಾಗಿದ್ದು, ಕಲಬುರಗಿ ಗ್ರಾಮೀಣ ಬಿಜೆಪಿ ಶಾಸಕ ಬಸವರಾಜ್ ಮತ್ತಿಮಡು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.. ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.