Publish Date: Sat, 22 Apr 2023 (16:00 IST)
Updated Date: Sat, 22 Apr 2023 (17:01 IST)
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್. ಸಾಗರ ಠಾಣಾ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ನಡೆಸುವ ವೇಳೆ ಉದ್ಯಮಿ ನಾಗರಾಜ ರೆಡ್ಡಿ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದು, ಉದ್ಯಮಿ ನಾಗರಾಜ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳ ಮೇಲೆ ಕಣ್ಣಿಟ್ಟಿದ್ದು, ತಪಾಸಣೆ ಮಾಡ್ತಿದ್ದಾರೆ. ಈ ವೇಳೆ ಉದ್ಯಮಿ ನಾಗರಾಜ ರೆಡ್ಡಿ ಕಾರನ್ನು ಪೊಲೀಸರು ತಡೆದು ತಪಾಸಣೆಗೆ ಒಳಪಡಿಸಿದಾಗ ನಾಗರಾಜ ರೆಡ್ಡಿ ಪೊಲೀಸ್ ಕಾನ್ಸ್ಟೆಬಲ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ.. ಕರ್ತವ್ಯ ನಿರತ ಪೊಲೀಸ್ ಕಾನ್ಸ್ಟೆಬಲ್ ಮೇಲೆ ಹಲ್ಲೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ನಾಗರಾಜ್ ರೆಡ್ಡಿಯನ್ನು ಬಂಧಿಸಲಾಗಿದೆ. ಐಪಿಸಿ ಸೆಕ್ಷನ್ 504, 332, 353 ಕಾಯ್ದೆ ಅಡಿ ಆರೋಪಿಯನ್ನ ಬಂಧಿಸಿಸಲಾಗಿದೆ.
geetha
Publish Date: Sat, 22 Apr 2023 (16:00 IST)
Updated Date: Sat, 22 Apr 2023 (17:01 IST)