ನಾನು ಕೂಡ ಬಜರಂಗಿ.. ನಮ್ಮ ಮನೆ ಹತ್ತಿರ ಬನ್ನಿ ನೋಡೊಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ KPCC ಅಧ್ಯಕ್ಷ ಡಿ.ಕೆ ಶಿವಕುಮಾರ್ಗೆ ಸಚಿವ ಆರ್.ಅಶೋಕ್ ಸವಾಲು ಹಾಕಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, ಎಲ್ಲರೂ ಕೂಡ RSS, ಬಜರಂಗದಳದಿಂದ ಬಂದಿರೋದು. ನಿಮಗೆ ಬ್ಯಾನ್ ಮಾಡೋಕೆ ತಾಕತ್ತು, ಧಮ್ ಇದೆಯಾ ಎಂದು ಪ್ರಶ್ನಿಸಿದ್ರು.. ಪಾಕಿಸ್ತಾನಕ್ಕೆ ಜೈ ಅನ್ನೋ ಸಂಸ್ಕಾರ ನಮ್ಮದಲ್ಲ. ಕಾಂಗ್ರೆಸ್ ಆಂಜನೇಯನ ಬಾಲಕ್ಕೆ ಬೆಂಕಿ ಇಟ್ಟಿದೆ.ಇದು ಇಡೀ ಕಾಂಗ್ರೆಸ್ ಅನ್ನೇ ಸುಟ್ಟು ಸರ್ವನಾಶ ಮಾಡುತ್ತೆ ಎಂದು ಕಿಡಿಕಾರಿದ್ರು.. ಬಜರಂಗದಳ ಬ್ಯಾನ್ ವಿಚಾರದಿಂದ ಕಾಂಗ್ರೆಸ್ ಇನ್ನಷ್ಟು ಸ್ಥಾನ ಕಳೆದುಕೊಳ್ಳುತ್ತೆ. ಹಿಂದೂ ರಕ್ಷಣೆ ಮಾಡುವವವರು ಬಜರಂಗದಳದವರು. ದೇಶ, ದೇವಸ್ಥಾನಗಳನ್ನು ರಕ್ಷಣೆ ಮಾಡೋದು ಬಜರಂಗದಳ. ಕಾಂಗ್ರೆಸ್ನವರು ಬಜರಂಗದಳವನ್ನು PFIಗೆ ಹೋಲಿಸುವುದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ರು. ಹಿಂದೂ ವಿರೋಧಿ ಭಾವನೆಯನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ.. ಇದಕ್ಕೆ ವಿರೋಧ ವ್ಯಕ್ತಪಡಿಸಿ ಎಲ್ಲ ಕಡೆ ಪ್ರತಿಭಟನೆ ನಡೆಯುತ್ತಿದೆ. ಇದೇ ಕಾರಣಕ್ಕೆ ಎಲ್ಲಾ ಕಡೆ ಹನುಮಾನ್ ಚಾಲೀಸಾ ಪಠಣ ಮಾಡಲಾಗುತ್ತದೆ. ಕಾಂಗ್ರೆಸ್ ದೇಶದಲ್ಲಿ ಸರ್ವನಾಶವಾಗುತ್ತದೆ. ಲಂಕೆಯಲ್ಲಿ ರಾವಣ ಸಂಹಾರ ಆದ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಇದೆಲ್ಲವೂ ಕಾಂಗ್ರೆಸ್ಗೆ ವ್ಯತಿರಿಕ್ತವಾಗುತ್ತದೆ ಎಂದು ಹೇಳಿದ್ರು.