Publish Date: Thu, 04 May 2023 (15:28 IST)
Updated Date: Thu, 04 May 2023 (16:30 IST)
ಚುನಾವಣೆ ಪ್ರಚಾರ ಹಿನ್ನೆಲೆ ರಾಯಚೂರಿನ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ್ ಪರ ಪ್ರಚಾರ ಮಾಡಲು ನಟ ಸುದೀಪ್ ದೇವದುರ್ಗಕ್ಕೆ ಆಗಮಿಸಿದ್ರು.ಕಲಬುರಗಿಯಿಂದ ದೇವದುರ್ಗಕ್ಕೆ ಹೆಲಿಕಾಪ್ಟರ್ನಲ್ಲಿ ಬಂದ ಸುದೀಪ್ರನ್ನ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.. ಹೆಲಿಕಾಪ್ಟರ್ ಬಳಿಯೇ ಓಡಿ ಬಂದ ಅಭಿಮಾನಿಗಳು ಬ್ಯಾರಿಕೇಡ್ ಮುರಿದು ಹೆಲಿಪ್ಯಾಡ್ಗೆ ನುಗ್ಗಿದ್ರು.. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.. ಪೊಲೀಸರ ಲಾಠಿ ಏಟು ಬೀಳುತ್ತಿದ್ದಂತೆ ಜನರು ಎದ್ನೋ ಬಿದ್ನೋ ಅಂತಾ ಓಡಿಹೋಗಿದ್ದಾರೆ.