Publish Date: Sat, 02 May 2020 (16:24 IST)
Updated Date: Sat, 02 May 2020 (16:26 IST)
ವಲಸೆ ಹೋಗಿರುವ ಕಾರ್ಮಿಕರಿಗೆ ಸರಕಾರದಿಂದ ಸಾರಿಗೆ ವ್ಯವಸ್ಥೆ ಮಾಡೋದಿಲ್ಲ ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ.
ಬೇರೆ ಬೇರೆ ರಾಜ್ಯಗಳಿಂದ ಕಲಬುರಗಿ ಜಿಲ್ಲೆಗೆ ಆಗಮಿಸುವ ವಲಸೆ ಕಾರ್ಮಿಕರು ತಮ್ಮ ಸ್ವಂತ ಖರ್ಚಿನಲ್ಲಿ ಬರಬೇಕು. ಹೀಗಂತ ಡಿಸಿಎಂ ಹಾಗೂ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಸರಕಾರದ ಮಾರ್ಗಸೂಚಿಯಂತೆ ವಲಸೆ ಹೋದವರು ರಾಜ್ಯಕ್ಕೆ, ಜಿಲ್ಲೆಗಳಿಗೆ ಬರಬಹುದು. ಆದರೆ ಅಲ್ಲಿಂದ ಬರುವ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡೋದಿಲ್ಲ. ಆದರೆ ಒಂದೇ ಸ್ಥಳಕ್ಕೆ ಬಹಳಷ್ಟು ಕಾರ್ಮಿಕರು ಬರುತ್ತಿದ್ದರೆ ಅಲ್ಲಿ ಬಸ್ ವ್ಯವಸ್ಥೆ ಕಲ್ಪಿಸಲು ಸರಕಾರ ನಿರ್ಧರಿಸಿದೆ. ಆದರೆ ಕಾರ್ಮಿಕರೇ ಟಿಕೆಟ್ ಕೊಂಡುಕೊಳ್ಳಬೇಕು ಎಂದಿದ್ದಾರೆ.
ಬೇರೆ ಜಿಲ್ಲೆ, ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ ಮಾಡಬೇಕು ಎಂದು ಅಧಿಕಾರಿಗಳಿಗೆ ಡಿಸಿಎಂ ಸೂಚನೆ ಕೊಟ್ಟಿದ್ದಾರೆ.