Publish Date: Sun, 10 May 2020 (22:21 IST)
Updated Date: Sun, 10 May 2020 (22:23 IST)
ರಾಜ್ಯದ ಮಂಗಳೂರಿನಿಂದ ಬಿಹಾರ್ ಹಾಗೂ ಉತ್ತರ ಪ್ರದೇಶಗಳಿಗೆ ರೈಲು ಹೊರಟಿವೆ.
ಬಿಹಾರ ಹಾಗೂ ಉತ್ತರ ಪ್ರದೇಶಗಳ ವಲಸೆ ಕಾರ್ಮಿಕರನ್ನು ಹೊತ್ತ 2 ರೈಲುಗಳು ಮಂಗಳೂರಿನಿಂದ ಹೊರಟಿವೆ.
ಉತ್ತರ ಪ್ರದೇಶಕ್ಕೆ 1140 ಕಾರ್ಮಿಕರನ್ನು ಹೊತ್ತೊಯ್ದ ರೈಲು ಮಂಗಳೂರು ಜಂಕ್ಷನ್ ನಿಂದ ಹೊರಟಿತು. ಸಂಜೆ ಅಷ್ಟೇ ಸಂಖ್ಯೆಯ ಪ್ರಯಾಣಿಕರನ್ನು ಹೊತ್ತು ಬಿಹಾರಕ್ಕೆ ಇನ್ನೊಂದು ರೈಲು ಹೊರಟಿದೆ.
ಉತ್ತರ ಪ್ರದೇಶಕ್ಕೆ ಹೋಗುವವರಿಗೆ ನಗರದ ಬಂದರ್, ಬೊಂಬಾಯಿ ಹೋಟೆಲ್, ಕಂಡತ್ ಪಳ್ಳಿ, ಕುದ್ರೋಳಿ, ಕಂಕನಾಡಿ, ಉಳ್ಳಾಲ ಹಾಗೂ ಬಿಹಾರಕ್ಕೆ ಹೋಗುವವರಿಗೆ ಪಣಂಬೂರು, ಜೋಕಟ್ಟೆ ಈ ಸ್ಥಳಗಳಿಂದ ವಲಸೆ ಕಾರ್ಮಿಕರನ್ನು ರೈಲು ನಿಲ್ದಾಣಕ್ಕೆ ಕರೆದುಕೊಂಡು ಬರಲು ಸುಮಾರು 23 ಬಸ್ಸುಗಳ ವ್ಯವಸ್ಥೆ ಮಾಡಲಾಗಿತ್ತು.