Publish Date: Wed, 17 Jul 2019 (10:45 IST)
Updated Date: Wed, 17 Jul 2019 (10:47 IST)
ಬೆಂಗಳೂರು : ಗುರುವಾರ ಸಿಎಂ ಕುಮಾರಸ್ವಾಮಿ ಸದಸನದಲ್ಲಿ ವಿಶ್ವಾಸಮತಯಾಚಿಸಲು ನಿರ್ಧಾರ ಮಾಡಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಾತ್ರ ಸಿಎಂ ವಿಶ್ವಾಸಮತ ಕಳೆದುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು 10.30 ಕ್ಕೆ ಸುಪ್ರೀಂಕೋರ್ಟ್ ನಿಂದ ತೀರ್ಪು ಬರಲಿದೆ. ಕೋರ್ಟ್ ತೀರ್ಪು ಏನಾಗುತ್ತದೆ ಎಂದು ನಾವೂ ಕಾದು ನೋಡುತ್ತಿದ್ದೇವೆ. ಇದರಿಂದ ರಾಜಕೀಯ ವಿಚಾರದಲ್ಲಿ ಏನು ಅನ್ನೋದು ಸ್ಪಷ್ಟ ಆಗುತ್ತದೆ ಎಂದು ಹೇಳಿದ್ದಾರೆ.
ನಾಳೆ ಸದನದಲ್ಲಿ ಮುಖ್ಯಮಂತ್ರಿ ವಿಶ್ವಾಸಮತ ಯಾಚಿಸಲಿದ್ದಾರೆ. ನನಗೆ ವಿಶ್ವಾಸವಿದೆ ಅದರಲ್ಲಿ ಸಿಎಂ ವಿಶ್ವಾಸ ಕಳೆದುಕೊಳ್ಳುತ್ತಾರೆ. ನಮಗೆ ಜಯ ಆಗುತ್ತದೆ ಎಂದು ಬಿಎಸ್ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.