Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ; ಗಣೇಶ್ ಬಂಧನವಾಗುವುದರ ಹಿಂದಿದೆಯಾ ಕಾಂಗ್ರೆಸ್ ಕೈವಾಡ

ಆನಂದ್ ಸಿಂಗ್ ಮೇಲೆ ಹಲ್ಲೆ  ಪ್ರಕರಣ; ಗಣೇಶ್ ಬಂಧನವಾಗುವುದರ ಹಿಂದಿದೆಯಾ ಕಾಂಗ್ರೆಸ್ ಕೈವಾಡ
ಬೆಂಗಳೂರು , ಬುಧವಾರ, 23 ಜನವರಿ 2019 (10:37 IST)
ಬೆಂಗಳೂರು : ಈಗಲ್ ಟನ್ ರೆಸಾರ್ಟ್ ನಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ `ರೌಡಿ’ ಶಾಸಕ ಕಂಪ್ಲಿ ಗಣೇಶ್ ಅವರನ್ನು ಈವರೆಗೂ ಬಂಧಿಸದಿರುವುದಕ್ಕೆ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ.

ಸೋಮವಾರ ಮಧ್ಯಾಹ್ನದವರೆಗೂ ರೆಸಾರ್ಟ್ ನಲ್ಲಿದ್ದ ಗಣೇಶ್ ತನ್ನ ವಿರುದ್ಧ ಎಫ್‍.ಐ.ಆರ್ ದಾಖಲಾಗುತ್ತಿದ್ದಂತೆ ದಿಢೀರ್ ಕಣ್ಮರೆಯಾಗಿದ್ದಾರೆ. ಐಪಿಸಿ ಸೆಕ್ಷನ್ 323(ಹಲ್ಲೆ), 324(ದೊಣ್ಣೆಯಿಂದ ಹಲ್ಲೆ), 307(ಕೊಲೆ ಯತ್ನ), 504(ಉದ್ದೇಶ ಪೂರ್ವಕ ಶಾಂತಿ ಕದಡುವುದು) 506(ಜೀವ ಬೆದರಿಕೆ) ಅಡಿ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಷ್ಟು ಹೊತ್ತಿಗೆ ಬಂಧನವಾಗಬೇಕಿತ್ತು. ಅಲ್ಲದೇ ರಾಮನಗರ ಡಿವೈಎಸ್ಪಿ ಪುರುಷೋತ್ತಮ್ ಹಾಗೂ ಬಿಡದಿ ಇನ್ಸ್ ಪೆಕ್ಟರ್ ಹರೀಶ್ ನೇತೃತ್ವದಲ್ಲಿ ಗಣೇಶ್ ಪತ್ತೆಗೆ ಮೂರು ತಂಡ ರಚನೆಯಾಗಿದ್ದು, ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಗಣೇಶ್ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

 

ಇವೆಲ್ಲವನ್ನು ಗಮನಿಸಿದರೆ ಮಾನ ಉಳಿಸಿಕೊಳ್ಳುವಲ್ಲಿ ಭರದಲ್ಲಿ `ರೌಡಿ ಎಂಎಲ್‍ಎ’ ರಕ್ಷಣೆಗೆ ಕಾಂಗ್ರೆಸ್ ಮುಂದಾಗುತ್ತಿದ್ದು, ಗಣೇಶ್ ಮತ್ತು ಆನಂದ್ ಸಿಂಗ್ ಜೊತೆಗೆ ಸಂಧಾನಕ್ಕೆ ಪ್ರಯತ್ನ ನಡೆಸುತ್ತಿದೆ. ಆದಕಾರಣ `ಕೈ’ ಶಾಸಕನಾಗಿರುವ ಗಣೇಶ್ ಹುಡುಕದಂತೆ ಪೊಲೀಸರ ಮೇಲೆ ಸರ್ಕಾರದಿಂದಲೇ ಒತ್ತಡ ಇದೆಯೇ? ಎನ್ನುವ ಪ್ರಶ್ನೆಯೂ ಈಗ ಮೂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಬಿಕಿನಿ ತೊಟ್ಟು ಏಕಾಂಗಿಯಾಗಿ ಎತ್ತರದ ಪರ್ವತ ಏರಿದ ಮಹಿಳೆಗೆ ಆಮೇಲೆ ಆಗಿದ್ದೇನು ಗೊತ್ತಾ?