Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಸಿಡಿಸಿದ ಏಕೈಕ ಗೋಲಿನ ನೆರವಿನಿಂದ ಅರ್ಜೆಂಟೀನಾ ಬ್ರೆಜಿಲ್ ತಂಡವನ್ನು ಬಗ್ಗುಬಡಿದು 28 ವರ್ಷಗಳ ನಂತರ ಮೊದಲ ಬಾರಿ ಕೋಪಾ ಅಮೆರಿಕ ಪ್ರಶಸ್ತಿ ಗೆದ್ದು ಇತಿಹಾಸ ಬರೆದಿದೆ.
ಶನಿವಾರ ನಡೆದ ಫೈನಲ್ ನಲ್ಲಿ ಬ್ರೆಜಿಲ್ ತಂಡವನ್ನು ಬಗ್ಗುಬಡಿಯುವ ಮೂಲಕ ಬ್ರೆಜಿಲ್ ತಂಡ ತವರಿನಲ್ಲಿ 2500 ದಿನಗಳಿಂದ ಹೊಂದಿದ್ದ ಅಜೇಯ ದಾಖಲೆಯನ್ನು ಮುರಿಯಿತು.
1993ರಲ್ಲಿ ಈಕ್ವೆಡಾರ್ ನಲ್ಲಿ ನಡೆದ ಗ್ಯಾಬ್ರಿಯೆಲ್ ಬ್ಯಾಟಿಸ್ಟಾ ನೇತೃತ್ವದ ತಂಡ 2-1 ಗೋಳುಗಳಿಂದ ಮೆಕ್ಸಿಕೊ ತಂಡವನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಇಷ್ಟು ದಿನಗಳ ನಂತರ ಮೆಸ್ಸಿ ನೇತೃತ್ವದಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು. ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನಾ ಮದೊಲ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು.