Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪೂರ್ವ ವಿಭಾಗದ ಡಿ.ಜೆ.ಹಳ್ಳಿ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಲಾಯಿತು. ಈ ವೇಳೆ ಭಾರತಿನಗರ ಠಾಣೆ ಇನ್ ಸ್ಪೆಕ್ಟರ್ ಆನಂದ್ ನಾಯ್ಕ್ ಅವರು ರೌಡಿಶೀಟರ್ ಗೆ ಪ್ರಶ್ನೆ ಕೇಳಿದ್ದು, ಉತ್ತರ ಹೇಳದೇ ರೌಡಿ ಇನ್ ಸ್ಪೆಕ್ಟರ್ ಅವರನ್ನು ಗುರಾಯಿಸಿದ್ದಾನೆ. ಇದರಿಂದ ಕೋಪಗೊಂಡ ಇನ್ ಸ್ಪೆಕ್ಟರ್ ರೌಡಿಶೀಟರ್ ಗೆ ಡಿಸಿಪಿ ಶರಣಪ್ಪ ಅವರ ಸಮ್ಮುಖದಲ್ಲಿಯೇ ಕಪಾಳ ಮೋಕ್ಷ ಮಾಡಿದ್ದಾರೆ.