Publish Date: Thu, 06 Dec 2018 (18:57 IST)
Updated Date: Thu, 06 Dec 2018 (18:59 IST)
ನಕಲಿ ವೈದ್ಯರು ಹಾಗೂ ನೋಂದಣಿ ನವೀಕರಣ ಮಾಡಿಕೊಳ್ಳದೇ ಅನಧಿಕೃತವಾಗಿ ವೃತ್ತಿ ಮುಂದುವರಿಸಿರುವ ವೈದ್ಯರ ವಿರುದ್ಧ ಕ್ರಮಕ್ಕೆ ಇಲಾಖಾ ಅಧಿಕಾರಿಗಳು ಕೊನೆಗೂ ಮುಂದಾಗಿದ್ದಾರೆ.
ಬಿಸಿಲೂರು ಖ್ಯಾತಿಯ ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಮಿತಿಮೀರುತ್ತಿದೆ. ಒಂದೆಡೆ ನಕಲಿ ವೈದ್ಯರ ಹಾವಳಿ ಇದ್ದರೆ ಮತ್ತೊಂದೆಡೆ ಪರವಾಣಿಗೆ ಹಾಗೂ ನೋಂದಣಿ ನವೀಕರಣ ಮಾಡದೇ ಬಹುತೇಕ ವೈದ್ಯರು ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ.
ಅನಧಿಕೃತ ಹಾಗೂ ನಕಲಿ ವೈದ್ಯರ ವಿರುದ್ಧ ಇಲಾಖಾಧಿಕಾರಿಗಳು ಏಳು ತಂಡಗಳನ್ನು ರಚನೆ ಮಾಡಿಕೊಂಡು ಕಾರ್ಯಾಚರಣೆಗೆ ಇಳಿದಿದ್ದಾರೆ.
ನಕಲಿ ವೈದ್ಯರಿಗೆ ಬಿಸಿ ಮುಟ್ಟಿಸುತ್ತಿದ್ದರೆ, ಅಧಿಕಾರಿಗಳ ದಾಳಿಯಿಂದ ಅನಧಿಕೃತ ವೈದ್ಯರು ಆಸ್ಪತ್ರೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ.