ಬೆಂಗಳೂರಿನ ಡಬಲ್ ಮರ್ಡರ್ ಆರೋಪಿಗಳು ಅಂದರ್ ಆಗಿದ್ದು, ಪೊಲೀಸರು ಕೋರಮಂಗಲ ಜೋಡಿ ಕೊಲೆ ಭೇದಿಸಿದ್ದಾರೆ. DCP ಸಿ.ಕೆ.ಬಾಬಾ ಟೀಂ ಹಂತಕರ ಹೆಡೆಮುರಿ ಕಟ್ಟಿದ್ಧಾರೆ. ಡಿಸಿಪಿ ಬಾಬಾ ಅವರು ಹಂತಕರ ಬೇಟೆಗೆ 3 ವಿಶೇಷ ತಂಡ ರಚನೆ ಮಾಡಿದ್ದರು. ಯಾವುದೇ ಕ್ಲೂ ಸಿಗದೇ ಇದ್ರೂ ತಾಂತ್ರಿಕ ಆ್ಯಂಗಲ್ನಲ್ಲಿ ತನಿಖೆ ನಡೆಸಿದ್ದರು. ಒಂದು ಕೊಲೆ ತನಿಖೆ ಮಾಡುವಾಗ ಮತ್ತೊಂದು ಕೊಲೆ ಬಯಲಾಗಿತ್ತು, ಹಂತಕರು ಒಬ್ಬನ ಕೊಲೆ ನೋಡಿದ್ದಕ್ಕೆ ಮತ್ತೊಬ್ಬನ ಮುಗಿಸಿದ್ದರು. ಪೊಲೀಸರು 11 CCTV ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ್ದರು. ಪರಿಚಯಸ್ಥರೇ ಕೊಲೆ ಮಾಡಿರೋ ಸುಳಿವಿನ ಮೇಲೆ ತನಿಖೆ ನಡೆಸಲಾಗಿತ್ತು. ಕದ್ದ ಹಣ, ಆಭರಣ ಹಂಚಿಕೆ ವಿಚಾರದಲ್ಲಿ ಕೊಲೆ ನಡೆದಿದೆ. ಕೋರಮಂಗಲ ಪೊಲೀಸರು ಇಬ್ಬರನ್ನ ಅರೆಸ್ಟ್ ಮಾಡಿದ್ದಾರೆ. ಆರೋಪಿಗಳು ಸೆಕ್ಯೂರಿಟಿ ಗಾರ್ಡ್, ಮನೆ ಕೆಲಸದವನ ಕೊಂದಿದ್ದರು. ಡಿಸೆಂಬರ್ 17ರಂದು ಡಬಲ್ ಮರ್ಡರ್ ನಡೆದಿದ್ದು, ಕೋರಮಂಗಲ ಪೊಲೀಸರಿಂದ ಜಗದೀಶ್, ಸುನೀಲ್ನನ್ನ ಅರೆಸ್ಟ್ ಮಾಡಲಾಗಿದೆ. ಕಂಟ್ರಾಕ್ಟರ್ ಗೋಪಾಲರೆಡ್ಡಿ ಮನೆಯಲ್ಲಿ ಕೊಲೆ ನಡೆದಿತ್ತು. ಪೊಲೀಸರು ಬ್ಯಾಡರಹಳ್ಳಿ ಬಳಿ ಆರೋಪಿಗಳನ್ನ ಬಂಧಿಸಿದ್ದರು. ಈ ಜಗದೀಶ ಬೇರೆ ಯಾರೂ ಅಲ್ಲ.. ರೆಡ್ಡಿ ಮನೆಯ ಕಾರ್ ಡ್ರೈವರ್ ಆಗಿದ್ದನ. ಡಿಸೆಂಬರ್ 15ರಂದು ಗೋಪಾಲರೆಡ್ಡಿ ಆಂಧ್ರಕ್ಕೆ ಮದುವೆಗೆ ತೆರಳಿದ್ದರು, ಜಗದೀಶ ಲಗ್ಗೆರೆಯ ಸ್ನೇಹಿತ ಸುನೀಲನ ಜತೆ ಆಟೋದಲ್ಲಿ ಬಂದಿದ್ದನು. ಆರೋಪಿಗಳು ಮೊದಲು ಸಿಸಿಟಿವಿ ಗಮನಿಸಿ ಹಿಂದಿನ ಬಾಗಿಲಿನಿಂದ ಬಂದು, ಸೆಕ್ಯೂರಿಟಿ ದಿಲ್ ಬಹದ್ದೂರ್ ಸೆಲ್ಲಾರ್ನಿಂದ ಜಿಗಿದ್ದಿದ್ದನ್ನು ನೋಡಿದ್ದ. ದಿಲ್ ಬಹದ್ದೂರ್ನನ್ನು ಉಸಿರುಗಟ್ಟಿಸಿ ಟೇಪ್ ಸುತ್ತಿ ಸಂಪ್ಗೆ ಎಸೆದಿದ್ದರು. ಮನೆಗೆಲಸದ ಕರಿಯಪ್ಪ ಬಾಗಿಲು ತಗೆಯೋವರೆಗೆ ರಾತ್ರಿಯೆಲ್ಲಾ ಕಾದಿದ್ರು, ಬಾಗಿಲು ತೆರೆಯುತ್ತಿದ್ದಂತೆ ಆತನನ್ನೂ ಕೊಂದು ಚಿನ್ನಾಭರಣ, ಹಣ ದೋಚಿದ್ದಾರೆ.