Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕಾಂಗ್ರೆಸ್ ರಾಜಕೀಯ ಸಭೆಯಲ್ಲಿ ಮಕ್ಕಳನ್ನು ದುರ್ಬಳಕೆ ಮಾಡಿದ ಆರೋಪ ಕೇಳಿಬಂದಿದೆ. ಬೆಳಗಾವಿಯ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ.. ಮಾಜಿ ಶಾಸಕ ರಾಜು ಕಾಗೆ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳನ್ನು ಬಳಕೆ ಮಾಡಿಕೊಳ್ಳಲಾಗಿದೆ.. ಏನೂ ಅರಿಯದ ಮಕ್ಕಳ ಕೊರಳಲ್ಲಿ ಕಾಂಗ್ರೆಸ್ ಪಕ್ಷದ ಶಾಲು ಹಾಕಿದ ಪೋಟೋ ವೈರಲ್ ಆಗಿದೆ.. ಪೋಟೋ ವೈರಲ್ ಆದ್ರೂ ಸಹ ಚುಣಾವಣಾ ಆಯೋಗ ಹಾಗೂ ತಾಲೂಕು ಆಡಳಿತ, ಕಂಡು ಕಾಣದಂತೆ ಕುಳಿತಿದ್ದು ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ