Publish Date: Mon, 10 Apr 2023 (18:40 IST)
Updated Date: Mon, 10 Apr 2023 (18:48 IST)
ಮಾಜಿ ಸಿಎಂ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧಿಸುವುದು ಪಕ್ಕಾ ಆಗಿದ್ದು, ಸೇಫ್ ಝೋನ್ಗಾಗಿ ಕೋಲಾರದಲ್ಲೂ ಸ್ಪರ್ಧೆ ಮಾಡಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಹೈಕಮಾಂಡ್ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡುತ್ತಾ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಸಿದ್ದರಾಮಯ್ಯ ಕೋಲಾರದಲ್ಲಿ ಬ್ಯಾಂಕ್ ಖಾತೆ ತೆರೆದಿದ್ದು, ಸಿದ್ದುಗೆ ಕೋಲಾರ ಎರಡನೇ ಕ್ಷೇತ್ರವಾಗುವ ಮುನ್ಸೂಚನೆ ಸಿಕ್ಕಿದೆಯಾ ಎಂಬ ಪ್ರಶ್ನೆ ಎದ್ದಿದೆ. ಚುನಾವಣಾ ಖರ್ಚು ವೆಚ್ಚಗಳಿಗಾಗಿ ಸಿದ್ದು ಕೋಲಾರದಲ್ಲಿ ಬ್ಯಾಂಕ್ ಅಕೌಂಟ್ ಓಪನ್ ಮಾಡಿಸಿದ್ದಾರೆ.. ನಾಮಪತ್ರ ಸಲ್ಲಿಕೆ ಆದ ದಿನದಿಂದ ಚುನಾವಣಾ ಖರ್ಚು ವೆಚ್ಚಗಳನ್ನು ಬ್ಯಾಂಕ್ ಅಕೌಂಟ್‌ನಲ್ಲಿ ತೋರಿಸಬೇಕಾಗಿರುತ್ತದೆ.. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕೋಲಾರದಲ್ಲಿ ಬ್ಯಾಂಕ್ ಖಾತೆ ಓಪನ್ ಮಾಡಿದ್ದಾರೆ.. ಆದ್ರಿಂದ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಫರ್ಧಿಸುವುದು ಪಕ್ಕಾನಾ ಎಂಬ ಚರ್ಚೆ ಜೋರಾಗಿದೆ.