ಮುಸ್ಲಿಂ ಸಮುದಾಯದ ಯುವಕನನ್ನು ಪ್ರೀತಿ ಮಾಡಿದ ಕಾರಣಕ್ಕೆ ಸ್ವಂತ ಮಗಳನ್ನೇ ತಂದೆಯೊಬ್ಬ ಕೊಲೆ ಮಾಡಿದ್ದಾನೆ.
ಮಗಳನ್ನು ಕೊಲೆ ಮಾಡಿ ಆಕೆಯ ದೇಹದ ಭಾಗಗಳನ್ನು ಸೂಟ್ ಕೇಸ್ ನಲ್ಲಿ ತುಂಬಿಕೊಂಡು ಹೋಗುತ್ತಿದ್ದಾಗ ಪ್ರಕರಣ ಬಯಲಿಗೆ ಬಿದ್ದಿದೆ.
48 ವರ್ಷದ ಪಾಪಿ ತಂದೆ ಅರವಿಂದ ತಿವಾರಿ ತನ್ನ 21 ವರ್ಷದ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ. ಮುಂಬೈನ ಥಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.