Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಟ್ರಾಫಿಕ್ ಫೈನ್ ಪಾವತಿಸಲು 50% ಆಫರ್

ಟ್ರಾಫಿಕ್ ಫೈನ್ ಪಾವತಿಸಲು 50% ಆಫರ್
bangalore , ಶುಕ್ರವಾರ, 3 ಫೆಬ್ರವರಿ 2023 (18:29 IST)
50% ಡಿಸ್ಕೌಂಟ್.ಈ ಬೋರ್ಡನ್ನ ದೊಡ್ಡ ದೊಡ್ಡ ಮಾಲ್‌ಗಳು.ಬಟ್ಟೆ ಅಂಗಡಿಗಳಲ್ಲಿ ಮಾತ್ರ ನೋಡಿರ್ತೀರಾ.ಆದ್ರೆ ಸರ್ಕಾರದ‌ ಮಟ್ಟದಲ್ಲೂ 50% ಡಿಸ್ಕೌಂಟ್ ಸಿಗ್ತಿದೆ ಅಂದ್ರೆ ನೀವು ನಂಬ್ತೀರಾ.ಖಂಡಿತಾ ನಂಬಲೇ ಬೇಕು.ಇದೇ 50% ಆಫರ್ ಲಾಭ ಪಡೆಯಲು ಜನ ಮುಗಿಬಿದ್ದಿದ್ರು.ಬೆಂಗಳೂರು ವಾಹನ ಸವಾರರಿಗೆ ಅದ್ರಲ್ಲೂ ಟ್ರಾಫಿಕ್ ನಿಯಮ ಉಲ್ಲಂಘಿಸಿದವ್ರಿಗೆ ಕರ್ನಾಟಕ ಸರ್ಕಾರ ಬಂಪರ್ ಆಫರ್ ನೀಡಿದೆ.ಇರುವ ಟ್ರಾಫಿಕ್ ದಂಡದ ಮೊತ್ತದಲ್ಲಿ ಶೇ.50 ರಷ್ಟು ಪಾವತಿಸಲು ಅನುಮತಿಯನ್ನು ನೀಡಿದೆ.ಇದರ ಪ್ರಯೋಜನವನ್ನು ಬೆಂಗಳೂರೊಗರು ಸರಿಯಾದ ರೀತಿಯಲ್ಲೆ ಪಡೆದುಕೊಳ್ತಿದ್ದಾರೆ.ಹೌದು ಸಾರಿಗೆ ಇಲಾಖೆ ಮತ್ತು ಹೈಕೋರ್ಟ್ ಲೀಗಲ್ ಸರ್ವಿಸಸ್ ಅಥಾರಿಟಿ 50 % ರಿಯಾಯಿತಿಯಲ್ಲಿ ದಂಡ ಕಟ್ಟಲು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು‌.ಈ ಮನವಿಗೆ ಸಮ್ಮತಿಸಿದ ಸರ್ಕಾರ‌ ಡಿಸ್ಕೌಂಟ್ ನೀಡಿ ನೋಟಿಫಿಕೇಶನ್ ಹೊರಡಿಸಿದೆ.ಸದ್ಯ ಒಂದು ಸಾವಿರ ಕೋಟಿಗೂ ಅಧಿಕ ದಂಡದ ಮೊತ್ತ ಬಾಕಿ ಇದ್ದು ಜನರು ಇದರ ಸದುಪಯೋಗ ಪಡೆಸಿಕೊಳ್ಳಬಹುದು.ರಿಯಾಯಿತಿ ದರದಲ್ಲಿ ದಂಡ ಪಾವತಿ ಮಾಡಬೇಕೆಂದರೆ ಫೆಬ್ರವರಿ 11 ರೊಳಗೆ ಮಾತ್ರ ಪಾವತಿಸಬೇಕು‌ ನಂತರ ಯಾವುದೇ ರಿಯಾಯಿತಿ ಇರೋದಿಲ್ಲ.

 ಕರ್ನಾಟಕ ಒನ್ ವೆಬ್ ಸೈಟ್ ಮೂಲಕ ವಿವರ ಪಡೆದು ದಂಡ ಪಾವತಿಸಬಹುದು.ಜೆತೆಗೆ ಪೇಟಿಎಂ ಮೂಲಕ ಉಲ್ಲಂಘನೆ ವಿವರ ಪಡೆದು ದಂಡ ಪಾವತಿಗೆ ಅವಕಾಶ ನೋಡಲಾಗಿದೆ.ಅಲ್ಲದೇ ಹತ್ತಿರದ ಸಂಚಾರ ಪೊಲೀಸ್ ಠಾಣೆಯಲ್ಲಿ ವಾಹನ ಸಂಖ್ಯೆ ನೀಡಿ ದಂಡ ಕಟ್ಟುವ ಮೂಲಕ‌ ರಶೀದಿ ಪಡೆದುಕೊಳ್ಳಬಹುದು.ಅಲ್ಲದೇ ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣೆ ಕೇಂದ್ರದ ಮೊದಲ ಮಹಡಿಯಲ್ಲಿ ದಂಡ ಕಟ್ಟಲು ಅನುಮತಿ ನೀಡಲಾಗಿದೆ.

ಇನ್ನೂ ಜನ ಕೂಡ ತಮ್ಮ ದಂಡ ಕಡಿಮೆ ಮೊತ್ತದಲ್ಲಿ ಕಟ್ಟಿ ಕ್ಲಿಯರ್ ಮಾಡಿಕೊಳ್ಳೋಣ ಅಂತಾ ದಂಡ ಪಾವತಿಗೆ ಮುಂದಾಗಿದ್ದಾರೆ.ಆಫರ್ ಕೊಟ್ಟ ಮೊದಲ ದಿನದಲ್ಲಿಯೇ ಕೋಟಿ ಕೊಟಿ ಮೊತ್ತದ ಹಣ ಹರಿದುಬಂದಿದೆ.ಸಿಟಿಮಂದಿ ಪೊಲೀಸರೆಂದರೆ ತಲೆ ಮರೆಸಿಕೊಂಡು ಹೋಗ್ತಿದ್ರು.ದಂಡ ಕಟ್ಟಿ ಅಂದ್ರೆ ತಲೆ ಕೆರೆದುಕೊಂಡು ನಿಂತಿರ್ತಿದ್ರು ಆದ್ರೆ ಇವತ್ತು ಜನರೇ ಪೊಲೀಸರನ್ನ ಹುಡುಕಿಕೊಂಡು ಬಂದು ಉತ್ಸುಕತೆಯಿಂದಲೇ ದಂಡ ಪಾವತಿ ಮಾಡುತ್ತಿದ್ದಾರೆ.ಸದ್ಯ 2 ಕೋಟಿ 35 ಲಕ್ಷದ 69 ಸಾವಿರದ 063 ಕೇಸ್ ಗಳು ಬಾಕಿ ಇದ್ರೆ.1144 ಕೋಟಿ,46 ಲಕ್ಷ,44 ಸಾವಿರದ 500 ರೂಪಾಯಿ ಮೊತ್ತದ ದಂಡ ಕಲೆಕ್ಟ್ ಆಗಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ 3 ದಿನಗಳ “ಖಾತಾ ಮೇಳ”ಕ್ಕೆ ಚಾಲನೆ