Publish Date: Fri, 03 Feb 2023 (17:14 IST)
Updated Date: Fri, 03 Feb 2023 (17:16 IST)
ರಾಜ್ಯ ಕಾಂಗ್ರೆಸ್ ನಲ್ಲಿ ಚುನಾವಣಾ ಹೊಸ್ತಿಲಲ್ಲೇ ತೀವ್ರ ಅಸಮಾಧಾನ ಹೊಗೆಯಾಡಿದೆ. ಗುರುವಾರ ಸಂಜೆ ನಡೆದ ಸಭೆಯಲ್ಲಿ ಜಿ. ಪರಮೇಶ್ವರ್ ಅವರು ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ತೋಡಿಕೊಂಡಿದ್ದರು. ಪ್ರಣಾಳಿಕೆ ಸಮಿತಿಗೆ ರಾಜೀನಾಮೆ ಕೊಡುವುದಾಗಿ ಬೆದರಿಕೆ ಒಡ್ಡಿದ್ದರು. ಕೂಡಲೇ ಎಚ್ಚೆತ್ತು ಕೊಂಡ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ ದೀಪ್ ಸುರ್ಜೆವಾಲಾ ಪರಮೇಶ್ವರ್ ಅವರನ್ನು ಸಮಾಧಾನಪಡಿಸಿದ್ದರು
ಈ ಬಗ್ಗೆ ಇಂದು ಬೆಳಗ್ಗೆಯಿಂದಲೇ ಡ್ಯಾಮೇಜ್ ಕಂಟ್ರೋಲ್ ಕಾಮಗಾರಿ ಪ್ರಾರಂಭವಾಗಿದ್ದು, ಇದರ ಅಂಗವಾಗಿ ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಜಿ ಪರಮೇಶ್ವರ್ ಅವರ ಕೊಡುಗೆಯ ಬಗ್ಗೆ ಮುಕ್ತ ಕಂಠದಿಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ