Publish Date: Mon, 28 Aug 2017 (13:21 IST)
Updated Date: Mon, 28 Aug 2017 (13:24 IST)
ಗಣೇಶ ಹಬ್ಬದಂದು ಆರ್`ಬಿಐ ಬಿಡುಗಡೆಗೊಳಿಸಿದ 200, 50 ರೂ. ಹೊಸ ನೋಟು ಬೆಂಗಳೂರಿನಲ್ಲಿ ಇಂದಿನಿಂದ ಲಭ್ಯವಾಗುತ್ತಿದೆ. ಹೀಗಾಗಿ, ನೃಪತುಂಗ ರಸ್ತೆಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದೆ ಹೊಸ ನೋಟು ಪಡೆಯಲು ಜನ ಕ್ಯೂ ನಿಂತಿದ್ಧಾರೆ.
ಆಗಸ್ಟ್ 25ರಂದೇ ಹೊಸ ನೋಟುಗಳು ಬಿಡುಗಡೆಯಾದರೂ ಅಂದು ಭ್ಯಾಂಕ್ ರಜೆ ಇದ್ದುದರಿಂದ ಬೆಂಗಳೂರಿಗೆ ನೋಟುಗಳ ರವಾನೆ ಆಗಿರಲಿಲ್ಲ. ಇದೀಗ, ಬೆಂಗಳೂರು ರಿಸರ್ವ್ ಬ್ಯಾಂಕ್ ಶಾಖೆಗೆ ಹೊಸ ನೋಟುಗಳ ಆಗಮನವಾಗಿದೆ. ಇಂದಿನಿಂದ ಿತರೆ ಬ್ಯಾಂಕ್`ಗಳಿಗೂ ನೋಟುಗಳ ರವಾನೆ ಆರಂಭವಾಗಲಿದೆ. ಹೊಸ ನೋಟುಗಳಿಗೆ ಅನುಗುಣವಾಗಿ ಎಟಿಎಂ ಅಪ್ಡೇಟ್ ಮಾಡುವ ಕಾರ್ಯ ಸಹ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಎಟಿಎಂಗಳಲ್ಲೂ ಸಹ ಹೊಸ ನೋಟುಗಳು ಸಿಗಲಿವೆ.
200 ರೂ. ಹೊಸ ನೋಟು ಹಳದಿ ಬಣ್ಣ ಹೊಂದಿದ್ದು, ಸ್ವಚ್ಛ ಭಾರತ ಲೋಗೋ, ಸಾಂಚಿ ಸ್ತೂಪ, ಅಶೋಕ ಸ್ತಂಭ, ಮಹಾತ್ಮಾ ಗಾಂಧೀಜಿ ಚಿತ್ರವಿದೆ. 50 ರೂ. ನೋಟಿನಲ್ಲಿ ಕರ್ನಾಟಕ ಹೆಮ್ಮೆಯ ಹಂಪಿ ಕಲ್ಲಿನ ರಥ, ಸ್ವಚ್ಛ ಭಾರತ ಲೋಗೋ, ಮಹಾತ್ಮಾ ಗಾಂಧೀಜಿ ಚಿತ್ರಗಳಿವೆ. ಎರಡೂ ನೋಟುಗಳಲ್ಲಿ ಅಂಧರಿಗೆ ಅನುಕೂಲವಾಗುವಂತಹ ಲಕ್ಷಣಗಳನ್ನ ಅಳವಡಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ