ಮಳೆಗಾಗಿ ರಾಜ್ಯ ಸರ್ಕಾರ ಉದ್ಧೇಸಿಸಿರುವ ಮೋಡ ಬಿತ್ತನೆ ಇವತ್ತಿನಿಂದ ಆರಂಭವಾಗಿದೆ. 36 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ಕಾರ ಮೋಡ ಬಿತ್ತನೆಗೆ ಮುಂದಾಗಿದೆ. ಹೊಯ್ಸಳ ಕಂಪನಿ ಇದರ ಗುತ್ತಿಗೆ ಪಡೆದಿದೆ.
ಈಗಾಗಲೇ ಜಕ್ಕೂರು ವಿಮಾನ ನಿಲ್ದಾಣದಲ್ಲಿ ಮೋಡ ಬಿತ್ತನೆ ವಿಮಾನಗಳು ಅಮೆರಿಕದಿಂದ ಬಂದು ಬೀಡು ಬಿಟ್ಟಿವೆ. ಎರಡು ವಿಮಾನಗಳು ಮೋಡ ಬಿತ್ತೆನೆ ಮಾಡಲಿವೆ. ಇವತ್ತು ಮಾಗಡಿ, ರಾಮನಗರದಲ್ಲಿ ಮೋಡಬಿತ್ತನೆ ಮಾಡಲಾಗುತ್ತಿದೆ.
ಮೋಡ ಬಿತ್ತನೆ ಹೇಗೆ..?: ಮಳೆ ಬೀಳುವ ಫಲವತ್ತಾದ ಮೋಡಗಳನ್ನ ಗುರುತಿಸಿ ಚಿತ್ರ ಸಮೇತ ಮಾಹಿತಿ ರವಾನೆಗೆ ಸುರಪುರ, ಗದಗ ಮತ್ತು ಬೆಂಗಳೂರಿನಲ್ಲಿ ರಾಡಾರ್`ಗಳನ್ನ ಸ್ಥಾಪಿಸಲಾಗಿದೆ. ರಾಜ್ಯದ ಯಾವ ಭಾಗದಲ್ಲಿ ಮಳೆ ಸುರಿಸಬಲ್ಲ ಮೋಡಗಳಿವೆ ಎಂಬುದನ್ನ ಪತ್ತೆ ಹಚ್ಚಿ ಅಲ್ಲಿ ಮಾತ್ರ ಮೋಡ ಬಿತ್ತನೆ ಮಾಡಲಾಗುತ್ತದೆ.360 ಡಿಗ್ರಿ ರೇಡಿಯಸ್`ನಲ್ಲಿ 200 ಕಿ.ಮೀ ದೂರದಲ್ಲಿ ಮಳೆ ಸುರಿಸಬಲ್ಲಮೋಡಗಲ ಮಾಹಿತಿಯನ್ನ ರಾಡಾರ್ ನಿಯಂತ್ರಣ ಕೇಂದ್ರಕ್ಕೆ ರವಾನಿಸುತ್ತದೆ. ಬಳಿಕ ಮೋಡಬಿತ್ತನೆಯ ವಿಮಾನದಲ್ಲಿ ಹೊರಡುವ ಪೈಲಟ್ ಮಳೆ ಸುರಿಸಬಲ್ಲ ಮೋಡಗಳ ಮೇಲೆ ಸಿಲ್ವರ್ ಅಯೋಡೈಡ್`ಗಳನ್ನ ಸಿಂಪಡಿಸುತ್ತಾನೆ.1ರಿಂದ 10 ಮೈಕ್ರಾನ್ ಗಾತ್ರದ ಹನಿಗಳನ್ನ ಈ ಸಿಲ್ವರ್ ಅಯೋಡೈಡ್ ದೊಡ್ಡ ಹನಿಗಳಾಗಿ ಮಾಡುತ್ತದೆ. ಬಳಿಕ ಹನಿಗಳ ಗಾಳಿಯಲ್ಲಿ ಚೆದುರಿಹೋಗದೇ ಮಳೆ ಸುರಿಸುತ್ತವೆ.
ಮೋಡಬಿತ್ತನೆಯಿಂದ ಯಾವ ಪ್ರಮಾಣದಲ್ಲಿ ಮಳೆ ಸುರಿಸಬಹುದು ಎಂಬುದನ್ನ ಯಾವ ವಿಜ್ಞಾನಿಯೂ ಇದುವರೆಗೆ ಖಚಿತಪಡಿಸಿಲ್ಲ. ಈ ಹಿಂದೆ ಎಸ್.ಎಂ. ಕೃಷ್ಣ ಸಿಎಂ ಆಗಿದ್ದ ಕಾಲದಲ್ಲೂ ಮೋಡಬಿತ್ತನೆ ಮಾಡಲಾಗಿತ್ತು. ಆದರೆ, ಫಲ ಸಿಕ್ಕಿರಲಿಲ್ಲ ಎಂಬುದು ಗಮನಾರ್ಹ. ಆದರೆ, ಥೈಲ್ಯಾಂಡ್, ಚೀನಾ ರಾಷ್ಟ್ರಗಳಲ್ಲಿ ಮೋಡಬಿತ್ತನೆಗೆಂದೇ ಸಾವಿರಾರು ಕೋಟಿ ರೂ. ವ್ಯಯಿಸಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ