ಹಲವು ಊಹಾಪೋಹಗಳ ಬಳಿಕ ಕೊನೆಗೂ 200 ರೂಪಾಯಿ ನೋಟು ಬರಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. 200 ರೂ. ಹೊಸ ನೋಟಿನ ಬಗ್ಗೆ ಗೆಜೆಟ್ ಅಧಿಸೂಚನೆಯಲ್ಲಿ ಹಣಕಾಸು ಸಚಿವಾಲಯವು ಸೂಚಿಸಿದ್ದು, ಆರ್`ಬಿಐನ ನಿರ್ದೇಶಕರ ಸೆಂಟ್ರಲ್ ಬೋರ್ಡ್ ಶಿಫಾರಸಿನ ಮೇರೆಗೆ ರೂ 200 ಟಿಪ್ಪಣಿಯನ್ನು ನಿರ್ದಿಷ್ಟಪಡಿಸಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
200 ರೂಪಾಯಿ ನೋಟು ಬಿಡುಗಡೆ ಬಗ್ಗೆ ಹಲವು ಊಹಾಪೋಹಗಳು ಎದ್ದಿದ್ದವು. ಕಳೆದ ಮಾರ್ಚ್`ನಲ್ಲೇ 200 ರೂಪಾಯಿ ನೋಟು ಬಿಡುಗಡೆ ಬಗ್ಗೆ ರಿಸರ್ವ್ ಬ್ಯಾಂಕ್ ನಿರ್ಧರಿಸಿದ್ದು, ನೋಟು ಮುದ್ರಣಕ್ಕೆ ಆದೆಶಿಸಿದೆ ಎಂದು ವರದಿಯಾಗಿತ್ತು.
ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ನಿಗಮ ನಿಯಮಿತದಡಿ ಬರುವ ಮೈಸೂರು ಮತ್ತು ಸಲ್ಬೋನಿ ಮುದ್ರಣಾಲಯಗಳಲ್ಲಿ ನೋಟು ಮುದ್ರಣಕ್ಕೆ ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ. ಸದ್ಯದಲ್ಲೇ, ನೋಟು ಬರಲಿದೆ ಎಂದಷ್ಟೆ ಹೇಳಿರುವ ಹಣಕಾಸು ಇಲಾಖೆ, ನೋಟಿನ ವಿನ್ಯಾಸದ ಬಗ್ಗೆ ಹೆಚ್ಚಿನ ಮಾಹಿತಿಯನ್ನ ಬಹಿರಂಗಪಡಿಸಿಲ್ಲ. ಈಗಾಗಲೇ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ನೋಟಿನ ವಿನ್ಯಾಸದ ಪ್ರಕಾರ, ಹೇಳುವುದಾದರೆ ನೇರಳ ಬಣ್ಣದ ಈ ನೋಟು ಹೊಸ 500 ಮತ್ತು 2000 ರೂ. ನೋಟುಗಳನ್ನ ಹೋಲುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ