Publish Date: Mon, 23 Oct 2023 (09:25 IST)
Updated Date: Mon, 23 Oct 2023 (08:28 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಿಂದಿನ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಈಗಾಗಲೇ ಕೇಳಿರುತ್ತೀರಿ.
ನಿತೇಶ್ ತಿವಾರಿ ನಿರ್ಮಿಸಲಿರುವ ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನ ಪಾತ್ರ ಮಾಡಲಿದ್ದಾರೆ. ಸೀತೆಯ ಪಾತ್ರಕ್ಕೆ ಸೌತ್ ಸುಂದರಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.
ಇದೀಗ ರಾವಣನ ಪಾತ್ರಕ್ಕಾಗಿ ಯಶ್ ಪಡೆಯಲಿರುವ ಸಂಭಾವನೆ ತಿಳಿದುಬಂದಿದೆ. ಈ ಸಿನಿಮಾಗೆ ಯಶ್ 100 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. ಕೆಜಿಎಫ್ 2 ಯಶಸ್ಸಿನ ಬಳಿಕ ಯಶ್ ಮಾರ್ಕೆಟ್ ವಾಲ್ಯೂ ಗಗನಕ್ಕೇರಿದೆ. ಹೀಗಾಗಿ ಭಾರೀ ಮೊತ್ತದ ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರಂತೆ.