Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಹೈದರಾಬಾದ್: ಬಾಹುಬಲಿ ಮೂಲಕ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದ ನಟ ಪ್ರಭಾಸ್ ಗೆ ಇಂದು ಜನ್ಮದಿನದ ಸಂಭ್ರಮ.
ಪ್ರಭಾಸ್ ಇಂದು 44 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ನಿನ್ನೆಯಿಂದಲೇ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಆರಂಭಿಸಿದ್ದಾರೆ.
ಪ್ರಭಾಸ್ ನಾಯಕರಾಗಿರುವ ಎರಡು ಸಿನಿಮಾಗಳು ಈಗ ಬಿಡುಗಡೆಗೆ ಬಾಕಿಯಿವೆ. ಸಲಾರ್ ಮತ್ತು ಪ್ರಾಜೆಕ್ಟ್ ಕೆ ಎರಡೂ ಬಹುತಾರಾಗಣದ ಬಿಗ್ ಬಜೆಟ್ ಸಿನಿಮಾಗಳು. ಎರಡೂ ಸಿನಿಮಾಗಳಿಂದ ಇಂದು ಹೊಸ ಅಪ್ ಡೇಟ್ ಸಿಗುವ ನಿರೀಕ್ಷೆಯಿದೆ. ಬಾಹುಬಲಿ ಬಳಿಕ ನಿರೀಕ್ಷಿತ ಸಕ್ಸಸ್ ಪ್ರಭಾಸ್ ಗೆ ಸಿಕ್ಕಿರಲಿಲ್ಲ. ಆದರೆ ಈಗ ಮುಂದಿರುವ ಎರಡು ಸಿನಿಮಾಗಳು ಬ್ರೇಕ್ ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.