ಬೆಂಗಳೂರು: ಕರ್ನಾಟಕದಲ್ಲಿ ಪರಭಾಷಾ ಸಿನಿಮಾಗಳಿಗೆ ಹೆಚ್ಚಿನ ಥಿಯೇಟರ್ ಸಿಗುತ್ತಿರುವುದಕ್ಕೆ ನಟ ಶಿವರಾಜ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ಶಿವಣ್ಣ ನಾಯಕರಾಗಿರುವ ಘೋಸ್ಟ್ ಸಿನಿಮಾ ಜೊತೆಗೆ ದಳಪತಿ ವಿಜಯ್ ಅವರ ಲಿಯೋ, ತೆಲುಗಿನ ಭಗವಂತ್ ಕೇಸರಿ, ಟೈಗರ್ ನಾಗೇಶ್ವರ್ ರಾವ್ ಸಿನಿಮಾಗಳು ಬಿಡುಗಡೆಯಾಗಿತ್ತು. ಘೋಸ್ಟ್ ಸಿನಿಮಾಗಿಂತ ಲಿಯೋಗೆ ಕರ್ನಾಟಕದಲ್ಲಿ ಹೆಚ್ಚಿನ ಶೋ ನೀಡಲಾಗಿದೆ.
ಇದರ ಬಗ್ಗೆ ಮಲ್ಟಿಪ್ಲೆಕ್ಸ್ ಥಿಯೇಟರ್ ಗಳ ವಿರುದ್ಧ ಶಿವಣ್ಣ ಕಿಡಿ ಕಾರಿದ್ದಾರೆ. ಮಲ್ಟಿಪ್ಲೆಕ್ಸ್ ಗಳಿಗೆ ಏನು ಕೊಂಬು ಇದೆಯಾ? ಕಾಂತಾರ ಸಿನಿಮಾ ಕೂಡಾ ಮೊದಲು ಜನಕ್ಕೆ ಪರಿಚಯವಿರಲಿಲ್ಲ. ಆದರೆ ಜನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ನಂತರವಷ್ಟೇ ಅಲ್ವಾ ಗೊತ್ತಾಗಿದ್ದು ಅದು ಎಂಥಾ ಅದ್ಭುತ ಸಿನಿಮಾವೆಂದು. ಶೋಗಳನ್ನೇ ಕೊಡದೇ ಹೋದರೆ ಹೇಗೆ? ಇದು ಗಂಭೀರ ಸಮಸ್ಯೆ. ಇದನ್ನು ಕೂತು ಬಗೆಹರಿಸಬೇಕು. ಯಾವ ಸಿನಿಮಾಗಳಿಗೂ ಅನ್ಯಾಯವಾಗಬಾರದು ಎಂದಿದ್ದಾರೆ ಶಿವಣ್ಣ.