Publish Date: Thu, 28 Jul 2022 (08:00 IST)
Updated Date: Thu, 28 Jul 2022 (08:40 IST)
ಬೆಂಗಳೂರು: ಇಂದಿನಿಂದ ವಿಶ್ವದಾದ್ಯಂತ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ರಿಲೀಸ್ ಆಗಿದೆ.
ಬೆಳ್ಳಂ ಬೆಳಿಗ್ಗೆಯೇ ಫಸ್ಟ್ ಶೋಗೇ ಜನ ಥಿಯೇಟರ್ ಗೆ ಮುತ್ತಿಕೊಂಡಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನ, ಥ್ರಿಲ್ಲಿಂಗ್ ಕತೆ, ಕಿಚ್ಚ ಸುದೀಪ್ ಖಡಕ್ ಅಭಿನಯ, ಕಣ್ಣಿಗೆ ತಂಪುಕೊಡಲು ಜ್ಯಾಕ್ವೆಲಿನ್ ಫರ್ನಾಂಡಿಸ್. ಇಷ್ಟು ಸಾಕಲ್ಲವೇ ವೀಕ್ಷಕರನ್ನು ಸೆರೆ ಹಿಡಿಯಲು.
3 ಡಿ ಮತ್ತು 2 ಡಿ ಶೋಗಳ ಮೊದಲ ದಿನದ ಟಿಕೆಟ್ ಭರ್ಜರಿ ಸೇಲ್ ಆಗಿದ್ದು, ಚಿತ್ರ ದಾಖಲೆಯ ಗಳಿಕೆ ಮಾಡಬಹುದು ಎನ್ನಲಾಗಿದೆ.