Publish Date: Wed, 27 Jul 2022 (16:48 IST)
Updated Date: Wed, 27 Jul 2022 (16:50 IST)
ಬೆಂಗಳೂರು: ನಾಳೆಯಿಂದ ತೆರೆ ಮೇಲೆ ವಿಕ್ರಾಂತ್ ರೋಣನ ಅಬ್ಬರ ಶುರು. ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾ ಕಿಚ್ಚ ಸುದೀಪ್ ಸಿನಿ ಕೆರಿಯರ್ ನಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ.
ಸಹಜವಾಗಿ ಕಿಚ್ಚನ ಅಭಿಮಾನಿಗಳಲ್ಲಿ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಈ ಕಾರಣಕ್ಕೆ ನಾನಾ ರೀತಿಯಲ್ಲಿ ಸಿನಿಮಾ ಯಶಸ್ಸಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ.
ಇವರೆಲ್ಲರ ಅಭಿಮಾನದಿಂದ ಕಿಚ್ಚನ ಹೃದಯ ತುಂಬಿ ಬಂದಿದೆ. ಈ ಕಾರಣಕ್ಕೆ ವಿಕ್ರಾಂತ್ ರೋಣ ಬಿಡುಗಡೆಗೆ ಮೊದಲು ಭಾವನಾತ್ಮಕ ಸಂದೇಶ ಕಳುಹಿಸಿದ್ದಾರೆ. ನಿಮ್ಮೆಲ್ಲರ ಪ್ರೀತಿ ನನ್ನ ಹೃದಯ ತುಂಬಿ ಬಂದಿದೆ. ನೀವೆಲ್ಲಾ ನನ್ನನ್ನು ಪ್ರೀತಿಯಿಂದ ವಿನೀತರಾಗಿಸಿದ್ದೀರಿ. ಧನ್ಯವಾದಗಳು ನಿಮ್ಮ ಪ್ರೀತಿಗೆ. ನನಗೆ ಗೊತ್ತಿರುವ ಏಕೈಕ ಕೆಲಸ ಸಿನಿಮಾ ಮೂಲಕ ನಿಮ್ಮೆಲ್ಲರಿಗೂ ನನ್ನಿಂದ ಸಾಧ್ಯವಾದಷ್ಟು ಮನರಂಜನೆ ನೀಡಲು ಪ್ರಯತ್ನಿಸುವ ಮೂಲಕ ನಿಮಗೆ ಧನ್ಯವಾದ ಸಲ್ಲಿಸಲು ಬಯಸುತ್ತೇನೆ ಎಂದಿದ್ದಾರೆ.