Publish Date: Wed, 27 Jul 2022 (16:22 IST)
Updated Date: Wed, 27 Jul 2022 (16:24 IST)
ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾಗಿ 100 ಕೋಟಿ ರೂ. ಕ್ಲಬ್ ಸೇರಿದ್ದ ಸಿನಿಮಾ 777 ಚಾರ್ಲಿಯ ಡಿಲೀಟೆಡ್ ದೃಶ್ಯವೊಂದನ್ನು ಈಗ ರಕ್ಷಿತ್ ಶೆಟ್ಟಿ ರಿಲೀಸ್ ಮಾಡಿದ್ದಾರೆ.
ಚಿತ್ರದಲ್ಲಿ ಈ ದೃಶ್ಯಕ್ಕೆ ಕತ್ತರಿ ಹಾಕಲಾಗಿತ್ತು. ಈಗ ಚಾರ್ಲಿ ಸಿನಿಮಾ 50 ದಿನ ಪೂರೈಸಿ ಒಟಿಟಿಯಲ್ಲಿ ಬಿಡುಗಡೆಯಾಗುವ ಹಂತದಲ್ಲಿ ರಕ್ಷಿತ್ ಶೆಟ್ಟಿ ಧರ್ಮ ಮತ್ತು ಉತ್ತಮ್ ಪಾತ್ರಧಾರಿಯ ನಡುವಿನ ತಮಾಷೆಯ ದೃಶ್ಯವೊಂದನ್ನು ಬಿಡುಗಡೆ ಮಾಡಿದ್ದಾರೆ.
ಇದಕ್ಕೂ ಮೊದಲು ಅದ್ರಿಕಾ ಹುಟ್ಟುಹಬ್ಬದ ದೃಶ್ಯವನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಇದು ಎರಡನೇ ಬಾರಿಗೆ ಚಿತ್ರದಲ್ಲಿ ಕತ್ತರಿ ಹಾಕಿದ್ದ ದೃಶ್ಯವನ್ನು ಚಾರ್ಲಿ ತಂಡ ರಿಲೀಸ್ ಮಾಡಿದೆ.