Publish Date: Tue, 02 Aug 2022 (09:10 IST)
Updated Date: Tue, 02 Aug 2022 (09:25 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾವೂ ನೂರು ಕೋಟಿ ಗಳಿಕೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದರೊಂದಿಗೆ ಮತ್ತೊಂದು ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ನೂರು ಕೋಟಿ ಕ್ಲಬ್ ಸೇರಿದ ದಾಖಲೆ ಮಾಡಿದೆ. ಇದರೊಂದಿಗೆ ಕೆಜಿಎಫ್, 777 ಚಾರ್ಲಿ ಬಳಿಕ ಈ ವರ್ಷ ಬಿಡುಗಡೆಯಾದ ಮತ್ತೊಂದು ಕನ್ನಡ ಸಿನಿಮಾ ಹೆಸರು ಮಾಡಿದೆ.
ಮೊದಲ ದಿನವೇ 40 ಕೋಟಿ ಗೂ ಅಧಿಕ ಗಳಿಕೆ ಮಾಡಿದ್ದ ವಿಕ್ರಾಂತ್ ರೋಣ ಬಳಿಕ ಕೊಂಚ ಡಲ್ ಹೊಡೆದರೂ ಥಿಯೇಟರ್ ನಲ್ಲಿ ಉತ್ತಮ ಪ್ರದರ್ಶನವನ್ನೇ ಕಾಣುತ್ತಿದೆ.