Publish Date: Sun, 31 Jul 2022 (09:20 IST)
Updated Date: Sun, 31 Jul 2022 (09:24 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಮೆಚ್ಚಿಕೊಂಡವರು ಹಲವರಾದರೂ ಈ ಸಿನಿಮಾ ಬಗ್ಗೆ ಟೀಕೆಗಳೂ ಕೇಳಿಬಂದಿತ್ತು.
ವಿಕ್ರಾಂತ್ ರೋಣ ಸಿನಿಮಾ ನೋಡಿದವರು ಇದು ರಂಗಿತರಂಗ ಪಾರ್ಟ್ 2 ಎಂದು ನಿರ್ದೇಶಕ ಅನೂಪ್ ಭಂಡಾರಿಯನ್ನು ಟೀಕಿಸಿದ್ದರು. ಇದೇ ಕಾರಣಕ್ಕೆ ಪರಭಾಷೆಗಳಲ್ಲಿ ಚಿತ್ರ ಅಷ್ಟೊಂದು ಸದ್ದು ಮಾಡುತ್ತಿಲ್ಲ ಎಂಬ ಟೀಕೆ ಕೇಳಿಬರುತ್ತಿದೆ.
ಆದರೆ ಇದಕ್ಕೆ ಕಾರಣವಾಗಿದ್ದು ಚಿತ್ರದಲ್ಲಿ ಹೇಳಲಾಗಿರುವ ಕಮರೊಟ್ಟು ಎಂಬ ಗ್ರಾಮದ ಹೆಸರು. ಇದೇ ಹೆಸರನ್ನು ಅನೂಪ್ ತಮ್ಮ ರಂಗಿತರಂಗ ಸಿನಿಮಾದಲ್ಲೂ ಬಳಸಿದ್ದರು. ಹೀಗಾಗಿ ಇಲ್ಲಿಯೂ ಅದೇ ಹೆಸರು ಬಳಸಿದ್ದರಿಂದ ಜನ ಇದನ್ನು ರಂಗಿತರಂಗ ಸಿನಿಮಾ ಜೊತೆ ಹೋಲಿಕೆ ಮಾಡುತ್ತಿದ್ದಾರೆ. ಅಲ್ಲದೆ, ಮತ್ತದೇ ಭೂತದ ಕತೆ ಎಂಬ ಕಾರಣಕ್ಕೆ ಅಪಸ್ವರ ಕೇಳಿಬಂದಿರಬಹುದು. ಹಾಗಿದ್ದರೂ ಕನ್ನಡದ ಮಟ್ಟಿಗೆ ಇದು ಹೊಸ ಪ್ರಯತ್ನ ಎನ್ನಬಹುದು.