Publish Date: Sun, 31 Jul 2022 (16:40 IST)
Updated Date: Sun, 31 Jul 2022 (16:41 IST)
ಬೆಂಗಳೂರು: ವಿಕ್ರಾಂತ್ ರೋಣ ಸಿನಿಮಾವನ್ನು ಮೆಚ್ಚಿ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಟ್ವೀಟ್ ಮಾಡಿದ್ದಾರೆ.
ಸಿನಿಮಾ ಬಗ್ಗೆ ರಾಜಮೌಳಿ ಮಾಡಿರುವ ಪ್ರಶಂಸೆಗೆ ಧನ್ಯವಾದ ಸಲ್ಲಿಸಿ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಇಂತಹ ಕತೆಯನ್ನು ಸಿನಿಮಾ ಮಾಡಲು ದೈರ್ಯ ಬೇಕು. ನೀವು ಆ ಸಾಹಸ ಮಾಡಿ ಅದಕ್ಕೆ ತಕ್ಕ ಫಲವನ್ನೂ ಪಡೆದಿದ್ದೀರಿ. ಪ್ರಿ ಕ್ಲೈಮ್ಯಾಕ್ಸ್ ಮತ್ತು ಸಿನಿಮಾದ ಹೃದಯ ಭಾಗ ಅದ್ಭುತವಾಗಿತ್ತು ಎಂದು ರಾಜಮೌಳಿ ಸಿನಿಮಾ ಬಗ್ಗೆ ವಿಮರ್ಶೆ ಬರೆದಿದ್ದಾರೆ.
ಇನ್ನು, ರಾಜಮೌಳಿ ಪ್ರತಿಕ್ರಿಯೆಗೆ ಸುದೀಪ್ ಪ್ರತಿಕ್ರಿಯಿಸಿದ್ದು, ನಿಮ್ಮಿಂದ ಇಂತಹ ಪ್ರಶಂಸೆ ಸಿಗುವುದು ಗೌರವದ ವಿಚಾರ. ತುಂಬಾ ಧನ್ಯವಾದಗಳು ಎಂದಿದ್ದಾರೆ.