Publish Date: Fri, 26 Mar 2021 (09:16 IST)
Updated Date: Fri, 26 Mar 2021 (09:18 IST)
ಬೆಂಗಳೂರು: ಮತ್ತೆ ಶುಕ್ರವಾರ ಬಂದಿದೆ. ಇಂದು ಗಾಂಧಿನಗರದಲ್ಲಿ ಎರಡು ಪ್ರಮುಖ ಸಿನಿಮಾಗಳು ತೆರೆಕಾಣುತ್ತಿವೆ. ಒಂದು ಚಿರು ಸರ್ಜಾ ಅಭಿನಯದ ಕೊನೆಯ ಸಿನಿಮಾ ರಣಂ. ಇನ್ನೊಂದು ಜೆಕೆ ಅಭಿನಯದ ನನ್ನ ಗುರಿ ವಾರಂಟ್.
ಚಿರು ಸರ್ಜಾ ಅಭಿನಯದ ಕೊನೆಯ ಸಿನಿಮಾ ರಣಂ ಇಂದು ತೆರೆ ಕಾಣುತ್ತಿದೆ. ಈ ಸಿನಿಮಾ ಪಕ್ಕಾ ಮಾಸ್ ಎಂಟರ್ ಟೈನರ್ ಆಗಿದ್ದು, ಪ್ರಸ್ತುತ ವಿದ್ಯಮಾನಗಳನ್ನಿಟ್ಟುಕೊಂಡೇ ಕತೆ ಹೆಣೆಯಲಾಗಿದೆ. ಸರ್ಜಾ ಕುಟುಂಬಕ್ಕೆ ಈ ಸಿನಿಮಾ ಬಗ್ಗೆ ವಿಶೇಷ ನಿರೀಕ್ಷೆಯಿದೆ.
ಇನ್ನೊಂದು ಸಿನಿಮಾ ನನ್ನ ಗುರಿ ವಾರಂಟ್. ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ, ತಾಂಡವ್ ರಾಮ್, ಮನೀಶಾ ಅಭಿನಯದ ಸಿನಿಮಾವಿದು. ಮನೀಶಾ ಅವರೇ ನಿರ್ಮಾಣದ ಜವಾಬ್ಧಾರಿಯನ್ನೂ ಹೊತ್ತಿದ್ದಾರೆ.