Publish Date: Wed, 24 Mar 2021 (11:06 IST)
Updated Date: Wed, 24 Mar 2021 (11:08 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಈಗ ಶೂಟಿಂಗ್ ನಿಂದ ಬಿಡುವಿನಲ್ಲಿದ್ದು, ಬಿಡುವಿನ ವೇಳೆ ದೇವರ ಸನ್ನಿಧಾನಕ್ಕೆ ತೆರಳಿದ್ದಾರೆ.
ಹರಿಪ್ರಿಯಾ ಮಂತ್ರಾಲಯಕ್ಕೆ ಭೇಟಿ ನೀಡಿ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದಿದ್ದಾರೆ. ರಾಯರ ಸನ್ನಿಧಾನದಲ್ಲಿ ಹರಿಪ್ರಿಯಾರನ್ನು ಮಂತ್ರಾಲಯದ ಸುಬುಧೇಂದ್ರ ಸ್ವಾಮಿಗಳು ಗೌರವಿಸಿ, ಆಶೀರ್ವಾದ ನೀಡಿದ್ದಾರೆ.
ಸ್ವಾಮೀಜಿಯವರಿಂದ ಸನ್ಮಾನಿಸಿಕೊಳ್ಳುವುದು ಅತ್ಯಂತ ಗೌರವದ ವಿಷಯ. ಅದಕ್ಕಿಂತ ಹೆಚ್ಚಾಗಿ ರಾಘವೇಂದ್ರ ಸ್ವಾಮಿಗಳು ಜನ್ಮದಿನದಂದೇ ನಾನು ಇಲ್ಲಿಗೆ ಭೇಟಿ ನೀಡಿರುವುದು ಇನ್ನಷ್ಟು ಖುಷಿ ನೀಡಿದೆ. ಇಲ್ಲಿಗೆ ಬಂದಾಗಲೆಲ್ಲಾ ನನಗೆ ಅದ್ಭುತ ಅನುಭವವಾಗುತ್ತದೆ. ಇಲ್ಲಿನವರ ಆತಿಥ್ಯ ನನ್ನಲ್ಲಿ ಯಾವತ್ತೂ ಹೊಸ ಚೈತನ್ಯ ನೀಡುತ್ತದೆ ಎಂದು ಹರಿಪ್ರಿಯಾ ಹೇಳಿದ್ದಾರೆ.