Publish Date: Thu, 25 Mar 2021 (10:20 IST)
Updated Date: Thu, 25 Mar 2021 (10:21 IST)
ಬೆಂಗಳೂರು: ಒಂದು ಕಾಲದ ಕುಚಿಕು ಗೆಳೆಯರಾಗಿದ್ದ ಕಿಚ್ಚ ಸುದೀಪ್ ಮತ್ತು ದರ್ಶನ್ ಈಗ ದೂರವಾಗಿ ನಾಲ್ಕು ವರ್ಷಗಳೇ ಕಳೆದಿವೆ. ಆದರೆ ಇಬ್ಬರೂ ದಿಗ್ಗಜ ನಟರು ಮತ್ತೆ ಒಂದಾಗಬೇಕೆಂದು ಬಯಸುವ ಎಷ್ಟೋ ಅಭಿಮಾನಿಗಳಿದ್ದಾರೆ.
ಇಂತಹ ಅಭಿಮಾನಿಗಳು ಈಗ ಕಿಚ್ಚ-ದಚ್ಚು ಒಂದಾಗಲೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ. #DbossKicchaCometogether ಎಂಬ ಹ್ಯಾಶ್ ಟ್ಯಾಗ್ ಜೊತೆಗೆ ಇಬ್ಬರೂ ಹಿಂದೆ ಜೊತೆಯಾಗಿ ತೆಗೆಸಿಕೊಂಡಿದ್ದ ಫೋಟೋವನ್ನು ಟ್ಯಾಗ್ ಮಾಡಿ ಅಭಿಯಾನ ಆರಂಭಿಸಿದ್ದಾರೆ.
ಇಬ್ಬರ ನಡುವಿನ ವೈಮನಸ್ಯ ಕಾರಣದಿಂದ ಇಬ್ಬರ ಅಭಿಮಾನಿಗಳೂ ಆಗಾಗ ಕಿತ್ತಾಡುತ್ತಾರೆ. ಇವರಿಬ್ಬರ ಕಿತ್ತಾಟದ ಲಾಭವನ್ನು ಎಷ್ಟೋ ಜನ ತಮ್ಮ ಸ್ವಯಂ ಲಾಭಕ್ಕೆ ಬಳಸುತ್ತಿದ್ದಾರೆ. ಹೀಗಾಗಿ ದರ್ಶನ್ ಮತ್ತು ಸುದೀಪ್ ಒಂದಾಗಬೇಕು ಎಂದು ಕೆಲವು ಅಭಿಮಾನಿಗಳು ಬಯಸಿದ್ದಾರೆ.